ಬಾಂಗ್ಲಾದೇಶ,ಮಾ28(AZM):ಢಾಕಾದ ಕಟ್ಟಡವೊಂದರಲ್ಲಿ ನಡೆದ ಭಾರೀ ಬೆಂಕಿ ಅವಘಡಕ್ಕೆ 17 ಮಂದಿ ಸಾವನ್ನಪ್ಪಿ ೭೦ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವ ಘಟನೆ ಇಂದು ನಡೆದಿದೆ.
ಢಾಕಾದ ಬನಾನಿ ವಾಣಿಜ್ಯ ಜಿಲ್ಲೆಯ ಎಫ್ ಆರ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದು, ಅವರನ್ನು ರಕ್ಷಣೆ ಮಾಡಿ ಹೊರತರಲಾಗಿದೆ. ಬೆಂಕಿಯ ತೀವ್ರತೆ ಕಡಿಮೆ ಮಾಡಲು ಸಾಧ್ಯವಾಗಿದ್ದು,ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ನಾಗರಿಕ ರಕ್ಷಣೆ ಹಾಗೂ ಅಗ್ನಿ ಶಾಮಕ ಸೇವೆಯ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ. . ಆದರೆ ಪೂರ್ತಿಯಾಗಿ ಬೆಂಕಿ ಇನ್ನೂ ಆರಿ ಹೋಗಿಲ್ಲ. ಹಾಗಾಗಿ ಕಟ್ಟಡದೊಳಗೆ ತುಂಬಿಕೊಂಡಿದ್ದ ವಿಷಾನಿಲ ಹೊರಗೆ ಬರಬೇಕು ಎಂದು ಗಾಜಿನ ಗೋಡೆಗಳನ್ನು ಒಡೆಯಲಾಗಿದೆ.
ಢಾಕಾದ ಬನಾನಿ ವಾಣಿಜ್ಯ ಜಿಲ್ಲೆಯ ಎಫ್ ಆರ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೇನಾ ಹೆಲಿಕಾಪ್ಟರ್ ಗಳು ಕೂಡ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಹನ್ನೆರಡಕ್ಕೂ ಹೆಚ್ಚು ಮಂದಿ ಕಟ್ಟಡದ ಥಾರಸಿಗೆ ಬಂದು, ಅವರನ್ನು ಅಲ್ಲಿಂದ ರಕ್ಷಿಸಲಾಗಿದೆ. ಬನಾನಿಯಲ್ಲಿ ಅಪಾರ ಪ್ರಮಾಣದಲ್ಲಿ ಬಹು ಅಂತಸ್ತಿನ ಕಟ್ಟಡಗಳು ಇವೆ. ಕಚೇರಿಗಳು, ವಿ.ವಿ. ಹಾಗೂ ರೆಸ್ಟೋರೆಂಟ್ ಗಳಿವೆ.