ಮಾಸ್ಕೋ,ಮಾ 29 (MSP):ಮಿಷನ್ ಶಕ್ತಿ ಯೋಜನೆಯ ಮೂಲಕ ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹಗಳನ್ನೂ ಹೊಡೆದುರುಳಿಸುವ ಭಾರತದ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ನ ಯಶಸ್ವಿ ಪರೀಕ್ಷಾರ್ಥ ಉಡಾವಣೆ, ವಿಶ್ವದ ಬಲಿಷ್ಠ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಸಾಧನೆ ಮಾಡಿದ ಅಮೇರಿಕ, ರಷ್ಯಾ, ಮತ್ತಿ ಚೀನಾದ ನಂತರ ಸ್ಥಾನದಲ್ಲಿ ಭಾರತವಿದ್ದು, ಬಾಹ್ಯಾಕಾಶ ಕಕ್ಷೆಯಲ್ಲೇ ಉಪಗ್ರಹವನ್ನು ಹೊಡೆದುರುಳಿಸಬಲ್ಲ ಕ್ಷಿಪಣಿ ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ರಷ್ಯಾ 'ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಉತ್ತಮವಲ್ಲ’ ಎಂದು ಭಾರತಕ್ಕೆ ತಿಳಿಸಿದೆ.
ಭಾರತದ ಯೋಜನೆ ಯಶಸ್ವಿಯಾಗಿ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಿದ ಹಿನ್ನಲೆಯಲ್ಲಿ, ಅಮೇರಿಕಾ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದ್ದು ಇದರ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಪೈಪೋಟಿ ಸರಿಯಲ್ಲ ಎಂದ ರಷ್ಯಾ, ಮುಂದೆ ಇಂತಹ ಯೋಜನೆಗಳು ಬಾಹ್ಯಾಕಾಶ ಉಪಗ್ರಹಳಿಗೆ ಮಾರಣಾಂತಿಕವಾಗಬಲ್ಲದು ಎಂದು ತಿಳಿಸಿದೆ.
ಶಾಂತಿ ಸ್ಥಾಪನೆಗಾಗಿ ಭಾರತದೊಂದಿಗೆ ರಷ್ಯಾ ಕೈಜೋಡಿಸಲು ಸಿದ್ದವಿದ್ದು, ಆದರೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನು ರಷ್ಯಾ-ಚೀನಾದಂತಹ ಸಮಾನ ಮನಸ್ಕ ರಾಷ್ಟ್ರಗಳು ವಿರೋಧಿಸುತ್ತದೆ ಎಂದು ಹೇಳಿದೆ.