ನವದೆಹಲಿ,ಮಾ 30(MSP): ಜರ್ಮನಿಯ ಮ್ಯೂನಿಚ್ನಲ್ಲಿ ಅಪರಿಚಿತ ವಲಸಿಗನೊಬ್ಬ ಕರ್ನಾಟಕ ಮೂಲದ ದಂಪತಿ ಗೆ ಚೂರಿ ಇರಿದಿದ್ದು ಪರಿಣಾಮ ಪತಿ ಸಾವನ್ನಪ್ಪಿದ್ದು ಪತ್ನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗಳನ್ನು ಕರ್ನಾಟಕ ಪ್ರಶಾಂತ್ ಮತ್ತು ಸ್ಮಿತಾ ಬಸ್ರೂರು ಎಂದು ಗುರುತಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮ್ಯೂನಿಚ್ ನಲ್ಲಿ ಅಪರಿಚಿತ ವಲಸಿಗನೊಬ್ಬ ಚೂರಿ ಇರಿತಕ್ಕೆ ಭಾರತೀಯನೊಬ್ಬ ಮೃತಪಟ್ಟಿದ್ದು, ಅವರ ಪತ್ನಿ ಸಿತ್ಮಾ ಅವರು ಚಿಕಿತ್ಸೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಪ್ರಶಾಂತ್ ಮತ್ತು ಸ್ಮಿತಾ ದಂಪತಿಗೆ ಮೂವರು ಮಕ್ಕಳಿದ್ದು, ಸ್ಮಿತಾ ಕರ್ನಾಟಕದ ಸಿದ್ದಾಪುರ ಮೂಲದವರಾದರೆ, ಪ್ರಶಾಂತ್ ಬಸ್ರೂರು ಮೂಲದವರು ಎಂದು ತಿಳಿದುಬಂದಿದೆ. ಪ್ರಶಾಂತ್ ಅವರ ಸಹೋದರನನ್ನು ಮ್ಯೂನಿಚ್ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ಅವರ ಕುಟುಂಬ ಅಲ್ಲಿ ತಲುಪುವವರೆಗೆ ಮಕ್ಕಳ ಆರೈಕೆ ಮಾಡುವಂತೆ ಜರ್ಮನಿಯಲ್ಲಿರುವ ಭಾರತೀಯ ದೂತವಾಸದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಶಾಂತ್ ಸಿತ್ಮಾ ದಂಪತಿ ಕಳೆದ 15 ವರ್ಷಗಳಿಂದ ಮ್ಯೂನಿಚ್ನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.