ಟೋಕಿಯೋ, ಏ 02 (MSP): ಹೆಸರು ಮಸಾಕೋ ವಕಾಮಿಯಾ, ಇವರ ವಯಸ್ಸು ಕೇವಲ 82 ವರ್ಷ ಅಷ್ಟೇ.! ಅರೆ ಈ ಅಜ್ಜಿಯೇನು ಮಹಾನ್ ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಬೇಡಿ. ಮುಖತುಂಬಾ ಸುಕ್ಕುಗಟ್ಟಿದ ಗೆರೆಗಳಿದ್ದರೂ ಇವರು, ಸಾಧನೆ ಮಾತ್ರ ಎಲ್ಲರನ್ನು ಅಚ್ಚರಿಗೀಡು ಮಾಡಬಹುದು. ಯಾಕೆಂದರೆ ಇವರು ವಿಶ್ವದ ಅತ್ಯಂತ ಹಿರಿಯ ಆ್ಯಪ್ ಡೆವಲಪರ್. ಇವರಿಗೆ ಐಫೋನ್ ಆ್ಯಪ್ ಡೆವಲಪ್ ಮಾಡುವುದು ಕೂಡಾ ಕರಗತವಾಗಿದೆ.
ಇತ್ತೀಚೆಗೆ ತಾನೆ ಇವರು ಆ್ಯಪಲ್ ಸಂಸ್ಥೆ ಆಯೋಜಿಸಿರುವ ಐಫೋನ್ ಡೆವಲಹರ್ ಜಾಗತಿಕ ಸಮಾವೇಶಕ್ಕೆ ಇವರು ಆಹ್ವಾನಿತರಾಗಿ ಸುದ್ದಿಯಲ್ಲಿದ್ದರು. ಅಬಾಕಸ್ ಮೂಲಕ ಗಣಿತ ಕಲಿತ ಮಸಾಕೋ ವಕಾಮಿಯಾ ಈ ಹಿಂದೆ ಬ್ಯಾಂಕ್ನಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಕಂಪ್ಯೂಟರ್ ನೊಂದಿಗೆ ನಂಟು ಪ್ರಾರಂಭವಾಗಿದ್ದು,1990 ಇಸವಿಯಲ್ಲಿ. ಬ್ಯಾಂಕ್ ನಿಂದ ನಿವೃತ್ತಿಯಾದ ಬಳಿಕ ಎಲ್ಲರಂತೆ ಸುಮ್ಮನೆ ಕೂರದೆ, ಕಂಪ್ಯೂಟರ್ ಮೇಲೆ ಹೆಚ್ಚಿನ ಅಸಕ್ತಿ ವಹಿಸಿಕೊಂಡು, ಅಧ್ಯಯನ ಪ್ರಾರಂಭಿಸಿದರು.
ಅಲ್ಲಿಂದ ಹಿಂತಿರುಗಿ ನೋಡದೆ ನಿರಂತರ ಕಲಿಕೆಯೊಂದಿಗೆ ಆ್ಯಪ್ ಡೆವಲಪ್ಮೆಂಟ್ನಲ್ಲಿ ತೊಡಗಿದ್ದಾರೆ ಮಸಾಕೋ ವಕಾಮಿಯಾ. ಇವರು ಅಭಿವೃದ್ದಿಪಡಿಸಿರುವ ಹಿನಾದಾನ್ ಆಪ್ ಬಹು ಪ್ರಚಾರದಲ್ಲಿದ್ದು ಇದು ಹಿರಿಯರಿಗಾಗಿ ಮಾಡಿರುವ ಆ್ಯಪ್ ಆಗಿದೆ. ಇದಲ್ಲದೆ ಇನ್ನಿತರ ಹಲವು ಆ್ಯಪ್ ಗಳನ್ನು ಹಿರಿಯರನ್ನ ಗಮನದಲ್ಲಿರಿಸಿಕೊಂಡು ಅಭಿವೃದ್ದಿಪಡಿಸಿದ್ದಾರೆ.
ಆ್ಯಪ್ ಮಾತ್ರವಲ್ಲದೆ ಇವರು 75ನೇ ವಯಸ್ಸಿಲ್ಲಿ ಪಿಯಾನೋ ಕಲಿತು ಅದರಲ್ಲೂ ಸೈ ಎಣಿಸಿಕೊಂಡಿದ್ದಾರೆ. ಇವ್ರ ತುಡಿತ, ಮತ್ತಷ್ಟು ಸಾಧಿಸಬೇಕು ಎನ್ನುವ ಹಂಬಲ ನಿಜಕ್ಕೂ ಯುವಪೀಳಿಗೆಗೆ ಮಾದರಿಯಾಗಿದೆ.