ಇಸ್ಲಾಮಾಬಾದ್ , ಏ 03(MSP): ಜೈಶ್ ಎ ಮೊಹಮ್ಮದ್ ಉಗ್ರಗ್ರಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಆತ ಕಳೆದ ಮಾರ್ಚ್ 2ರಂದು ರಾವಲ್ಪಿಂಡಿಯಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇದನ್ನು ಪಾಕಿಸ್ತಾನ ಎಲ್ಲೂ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.
ಉಗ್ರ ಮಸೂದ್ ಅಜರ್ ಲಿವರ್ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಮಸೂದ್ ಅಜರ್ ಸತ್ತಿದ್ದಾನೆ ಎಂಬ ವರದಿಗಳು ಹರಿದಾಡಿದಾಗ ಜೈಶ್ ಎ ಮೊಹಮ್ಮದ್ ಸಂಘಟನೆ ಇದನ್ನು ತಲ್ಲಿಹಾಕಿತ್ತು. ’ನಮ್ಮ ಮುಖ್ಯಸ್ಥ ಆರೋಗ್ಯವಾಗಿ ಜೀವಂತ ಇದ್ದಾನೆ ’ ಎಂದು ಸ್ಪಷ್ಟಪಡಿಸಿತ್ತು.
ಇದಲ್ಲದೆ ಕೆಲ ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಶಿ, ಉಗ್ರ ಮಸೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಹೇಳಿದ್ದರು. 'ನನಗೆ ದೊರಕಿದ ಮಾಹಿತಿ ಪ್ರಕಾರ ಪಾಕ್ ನಲ್ಲಿರು ಮಸೂದ್ ತೀವ್ರ ಅಸ್ವಸ್ಥನಾಗಿದ್ದಾನೆ ಮತ್ತು ಮನೆಯಿಂದ ಹೊರಹೋಗಲಾಗದಷ್ಟು ಅನಾರೋಗ್ಯ ಪೀಡಿತನಾಗಿದ್ದಾನೆ’ ಎಂದು ಹೇಳಿಕೆ ನೀಡಿದ್ದರು.