ಜರ್ಮನ್, ಏ 04(MSP): ಜರ್ಮನಿಯಲ್ಲಿ ಆಗಂತುಕನ ದಾಳಿಯಿಂದ ಕೊಲೆಯಾದ ಪ್ರಶಾಂತ್ ಬಸ್ರೂರು ಅವರ ತಾಯಿ ಹಾಗೂ ಗಂಭೀರ ಗಾಯಗೊಂಡಿರುವ ಅವರ ಪತ್ನಿ ಸ್ಮಿತಾ ಅವರ ಪೋಷಕರು ಬುಧವಾರ ಮುಂಜಾನೆ ಚೆನ್ನೈ ನಿಂದ ಜರ್ಮನಿಗೆ ತೆರಳಿದ್ದಾರೆ.
ಪ್ರಶಾಂತ್ ಬಸ್ರೂರು ತಾಯಿ ವಿನಯಾ, ಸ್ಮಿತಾ ಅವರ ತಂದೆ ಡಾ| ಚಂದ್ರಮೌಳಿ ಸಿದ್ದಾಪುರ ಹಾಗೂ ತಾಯಿ ವಿದ್ಯಾ ಅವರು ಜರ್ಮನಿಗೆ ಪ್ರಯಾಣ ಬೆಳೆಸಿದ್ದು, ಬುಧವಾರ ಮಧ್ಯರಾತ್ರಿ ಅಲ್ಲಿಗೆ ತಲುಪಿರುವ ಸಾಧ್ಯತೆ ಇದೆ.
ಮಾ.29ರಂದು ನಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಶಾಂತ್ ಅವರ ಪತ್ನಿ ಸ್ಮಿತಾ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಚೇತರಿಕೊಳ್ಳುತ್ತಿದ್ದು ಬುಧವಾರ ಮಕ್ಕಳಾದ ಸಾಸ್ಕ್ಷಿ ಹಾಗೂ ಶ್ಲೋಕ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಶಾಂತ್ ಅವರ ತಾಯಿ ವಿನಯಾ ಅವರು ಜರ್ಮನಿಗೆ ಈಗಾಗಲೇ ತೆರಳಿದ್ದಾರೆ. ಪ್ರಶಾಂತ್ ಬಸ್ರೂರು ಅವರ ಅಂತ್ಯಸಂಸ್ಕಾರವು ಗುರುವಾರದಂದು ಆಗ್ಸ್ ಬರ್ಗ್ ನಲ್ಲಿ ದಕ್ಷಿಣ ಭಾರತೀಯ ಸಂಪ್ರದಾಯದಂತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.