ಅಬುಧಾಬಿ, ಎ04(SS): ಪ್ರಧಾನಿ ಮೋದಿ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್(UAE) ನ ಅತ್ಯುನ್ನತ ನಾಗರಿಕ ಗೌರವವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ಯುಎಇ ಅಧ್ಯಕ್ಷ ಖಾಲಿಫಾ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವವಾದ 'ಝಾಯದ್ ಮೆಡಲ್' ಅನ್ನು ಘೋಷಿಸಿದ್ದಾರೆ. ಯುಎಇ ಮತ್ತು ಭಾರತದ ನಡುವೆ ಅತ್ಯುತ್ತಮ ಸಂಬಂಧ ಸೃಷ್ಟಿಸಿದ ಕಾರಣಕ್ಕೆ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಜಾಯದ್ ಟ್ವೀಟ್ ಮಾಡಿದ್ದಾರೆ.
ಯುಎಇ ಅಧ್ಯಕ್ಷ ಖಾಲಿಫಾ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್, ಭಾರತ ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರ ಕಾರ್ಯತಂತ್ರ ಹೊಂದಿದ್ದೇವೆ. ಇದಕ್ಕೆಲ್ಲ ಕಾರಣ ನನ್ನ ಆತ್ಮೀಯ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿ. ಈ ಸಂಬಂಧಕ್ಕೆ ಒತ್ತು ನೀಡಿದ್ದು ಅವರು. ಅವರ ಈ ಪ್ರಯತ್ನಕ್ಕಾಗಿ ನಾವು ಅವರಿಗೆ ಯುಎಇಯ ಉನ್ನತ ಗೌರವವನ್ನು ನೀಡುತ್ತಿದ್ದೇವೆ ಎಂದು ಅಬುಧಾನಿಯ ಯುವರಾಜ ಟ್ವೀಟ್ ಮಾಡಿದ್ದಾರೆ.