ಕರಾಚಿ,ಏ.7(AZM):ಈ ತಿಂಗಳಲ್ಲಿ ಭಾರತ ಮತ್ತೊಮ್ಮೆ ಪಾಕ್ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನಕ್ಕೆ ಇರುವ 'ವಿಶ್ವಾಸಾರ್ಹ ಗುಪ್ತಚರ' ಮಾಹಿತಿ ನೀಡಿದೆ ಎಂದು ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿಯವರು ಪಾಕಿಸ್ತಾನದ ಮುಲ್ತಾನ್ ನಲ್ಲಿ ತಿಳಿಸಿದ್ದಾರೆ.
ಏ.16ರಿಂದ 20ರೊಳಗೆ ದಾಳಿ ನಡೆಯಬಹುದು ಎನ್ನುವ ದಿನಾಂಕವನ್ನು ಕೂಡ ಖುರೇಷಿ ಹೇಳಿದ್ದಾರೆ. "ನಮಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಬಂದಿದ್ದು, ಪಾಕಿಸ್ತಾನದ ಮೇಲೆ ಹೊಸದಾಗಿ ದಾಳಿ ನಡೆಸಲು ಭಾರತ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.
ನಿರ್ದಿಷ್ಟವಾಗಿ ಇಂಥ ದಿನ ಎಂದು ಹೇಳುತ್ತಿರುವುದಕ್ಕೆ ಪಾಕಿಸ್ತಾನದ ಬಳಿ ಸಾಕ್ಷ್ಯ ಏನಿದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಜನರ ಜತೆಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಭಾರತದ ವಿದೇಶಾಂಗ ಕಚೇರಿ ಯಾವುದೇ ಪ್ರತಿಕ್ರಿಯೆಯನ್ನು ತಕ್ಷಣಕ್ಕೆ ನೀಡಿಲ್ಲ. ಭಾರತದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಗೆ ಯುದ್ಧ ದಾಹ ಎಂದು ಜರಿದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಭಾರತೀಯ ವಾಯು ಸೇನೆಯಿಂದ ಪಾಕಿಸ್ತಾನದ ಯಾವುದೇ ಯುದ್ಧ ವಿಮಾನ ಹೊಡೆದುರುಳಿಸಿಲ್ಲ ಎಂದು ಪಾಕ್ ವಾದಿಸುತ್ತಲೇ ಇದೆ.