ಇಸ್ಲಾಮಾಬಾದ್, ಏ 10(MSP): ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನ ನೀಡಿದ್ದು ಈ ಸಂದರ್ಭ "ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮಾತ್ರ ಜಮ್ಮು-ಕಾಶ್ಮೀರದ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ದೊರಕಲಿದೆ " ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, " ಭಾರತದಲ್ಲಿ ಒಂದೊಮ್ಮೆ ಎಡಪಂಥೀಯ ಕಾಂಗ್ರೆಸ್ ಪಕ್ಷ ಜಯ ಗಳಿಸಿದರೆ, ಪಾಕಿಸ್ತಾನದ ಜೊತೆಗೆ ಮಾತುಕತೆಗೆ ಬರಲು ಹಿಂದೇಟು ಹಾಕುತ್ತದೆ. ಆದರೆ, ಬಲಪಂಥೀಯ ಬಿಜೆಪಿ ಗೆದ್ದರೆ ಭಾಗಶಃ ಜಮ್ಮು-ಕಾಶ್ಮೀರ ವಿಷಯದಲ್ಲಿ ಮಾತುಕತೆಯೊಂದಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶಗಳು ಹೆಚ್ಚಿವೆ" ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು ಕಾಶ್ಮೀರದ ರಾಜತಾಂತ್ರಿಕ ಸಮಸ್ಯೆಗೆ ಸೇನೆ ಮೂಲಕ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದಿದ್ದಾರೆ. ಉಗ್ರ ಸಂಘಟನೆಗಳ ಸದೆಬಡಿಯಲು ಪಾಕ್ ಕೂಡಾ ಸಿದ್ಧವಾಗಿದ್ದು, ಆದರೆ ಇದಕ್ಕೂ ಮುನ್ನ ಭಾರತ ಪಾಕ್ ಜತೆಗೆ ಶಾಂತಿ ಮಾತುಕತೆಗೆ ಬರಬೇಕು ಎಂದಿದ್ದಾರೆ.
ಇದೇ ವೇಳೆ ಭಾರತರ ಪ್ರಧಾನಿ ಮೋದಿ ವಿರುದ್ದ ಆರೋಪಗಳ ಸುರಿಮಳೆಯನ್ನೇ ಖಾನ್ " ಭಾರತದಲ್ಲಿ ಹಲವು ವರ್ಷಗಳಿಂದ ಮುಸ್ಲಿಂರು ಸಂತೃಪ್ತ ಜೀವನ ನಡೆಸುತ್ತಿದ್ದರು. ಆದ್ರೆ ಈಗಿನ ಪರಿಸ್ಥಿತಿಯೇ ಸಂಪೂರ್ಣ ವಿಭಿನ್ನವಾಗಿದ್ದು ಮುಸ್ಲೀಮರು ಚಿಂತಾಕ್ರಾಂತರಾಗಿದ್ದಾರೆ ” ಎಂದು ಆರೋಪಿಸಿದ್ದಾರೆ.