ಜೆರುಸಲೇಮ್, ಏ 11 (MSP): ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೇತನ್ಯಾಹು ಐದನೇ ಬಾರಿಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅವರ ಬಲಪಂಥೀಯ ಲಿಕುಡ್ ಮತ್ತು ಮೈತ್ರಿಕೂಟದ ಇತರೆ ರಾಷ್ಟ್ರೀಯವಾದಿ ಹಾಗೂ ಪಕ್ಷಗಳು ಮುನ್ನೆಡೆ ಸಾಧಿಸಿವೆ. ಹೀಗಾಗಿ ಹಾಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸತತ ಐದನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬರುವುದು ಬಹುತೇಕ ಖಾತ್ರಿಯಾಗಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಧಾನಿ ಮೋದಿ ನೇತನ್ಯಾಹು ಅವರಿಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ನೆತನ್ಯಾಹು ದಾಖಲೆಯ ಸತತ 5ನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದ್ದು, ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಬೆನ್ನಿ ಗ್ಯಾಂಟ್ಸ್ ಬಹುತೇಕ ಸೋಲೊಪ್ಪಿಕೊಂಡಿದ್ದಾರೆ. 120 ಸದಸ್ಯ ಬಲವಿರುವ ಇಸ್ರೇಲ್ ನಲ್ಲಿ ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು 61 ಸ್ಥಾನಗಳ ಅವಶ್ಯಕತೆ ಇದೆ. 65 ಸದಸ್ಯ ಬಲದ ಬೆಂಬಲದೊಂದಿಗೆ ನೆತನ್ಯಾಹು ಅಧಿಕಾರದ ಗದ್ದುಗೆ ಏರಲಿದ್ದಾರೆ.
ಒಟ್ಟಾರೆ ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ.