ಕರಾಚಿ, ಏ 12(MSP): ಪಾಕಿಸ್ತಾನದ ಕ್ವೆಟಾ ನಗರದಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ 16 ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕ್ವೆಟಾದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ಬಾಂಬ್ ಸ್ಪೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆಯಲ್ಲಿ ಮೂವತ್ತು ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರಲ್ಲಿ ಕನಿಷ್ಟ ಏಳು ಜನರು ಹಜಾರಿಗಂಜ್ ಪ್ರದೇಶದ ನಿವಾಸಿಗಳಾಗಿದ್ದು ಹಜಾರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಂಬ್ ಸ್ಪೋಟದಿಂದ ತೀವ್ರತೆಯಿಂದ ತರಕಾರಿ ಮಾರುಕಟ್ಟೆಯ ಸನಿಹದಲ್ಲಿರುವ ಕಟ್ಟಡಗಳಿಗೂ ಹಾನಿಯಾಗಿದೆ. ಇನ್ನು ಘಟನೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ ಎಂದು ಕ್ವೇಟಾದ ಪೊಲೀಸ್ ಇಲಾಖೆ ತಿಳಿಸಿದೆ.