ಪ್ಯಾರಿಸ್, ಏ 16(Daijiworld News/MSP): ಪ್ಯಾರಿಸ್ನ ಐತಿಹಾಸಿಕ ಕಟ್ಟಡ ನಾಟ್ರೆ ಡೇಮ್ ಕ್ಯಾಥೊಲಿಕ್ ಚರ್ಚ್ ಕಟ್ಟಡದಲ್ಲಿ ಸೋಮವಾರ ಸಂಜೆ ವೇಳೆಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು ಕುಸಿದು ಬಿದ್ದಿವೆ.
ಐತಿಹಾಸಿಕ ಸ್ಥಳವಾಗಿರುವ ಚರ್ಚ್ ಗೆ ಪ್ರತಿನಿತ್ಯ ಸಾವಿರಾರು ಜನಭೇಟಿ ನೀಡುತ್ತಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಮಾಹಿತಿ ಪ್ರಕಾರ ಐತಿಹಾಸಿಕ ಕಟ್ಟಡದ ನವೀಕರಣ ಕಾರ್ಯಗಳು ನಡೆಯುತ್ತಿದ್ದಾಗ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹಬ್ಬಿದೆ. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ 500 ವಾಹನಗಳು ಆಗಮಿಸಿ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ
ಘಟನೆಯಿಂದ ಚರ್ಚ್ ನ ಎರಡು ಉನ್ನತ ಗೋಪುರಗಳಿಗೆ 75 ಶೇಕಡಾಕ್ಕೂ ಹೆಚ್ಚು ಹಾನಿಯಾಗಿದೆ ಎಂದು ತಿಳಿದುಬಂದಿದೆ.