ಪ್ಯಾರೀಸ್,ಏ17(Daijiworld News/AZM):ಬೆಂಕಿ ಅವಘಡದಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಪ್ಯಾರೀಸ್ ನಲ್ಲಿರುವ ಐತಿಹಾಸಿಕ ಚರ್ಚ್ ನ ಪುನರ್ನಿರ್ಮಾಣಕ್ಕಾಗಿ ಸುಮಾರು 4 ಸಾವಿರ ಕೋಟಿ ರೂ ಸಹಾಯಧನ ಹರಿದು ಬಂದಿದೆ.
850 ವರ್ಷಗಳ ಐತಿಹಾಸಿಕ ಹೊಂದಿರುವ ನೋಟ್ರೆ-ಡೇಮ್ ಕ್ಯಾಥೆಡ್ರಲ್ ಚರ್ಚ್ ಗೆ ಬೆಂಕಿ ತಗುಲಿದ್ದು, ಇದಕ್ಕೆ ಕಾರಣವೇನು ಎಂದು ತಿಳಿದುಬಂದಿರಲಿಲ್ಲ. ಆದರೆ ಘಟನೆ ನಡೆದು ಕೇವಲ 15 ಗಂಟೆಯಲ್ಲಿ ಚರ್ಚ್ ನ ಪುನರ್ ನವೀಕರಣಕ್ಕಾಗಿ 4 ಸಾವಿರ ಕೋಟಿ ರೂ.(564 ಮಿಲಿಯನ್ ಡಾಲರ್) ದೇಣಿಗೆ ರೂಪದ ನೆರವು ಹರಿದುಬಂದಿದೆ ಎಂದು ಚಚ್ರ್ ಫೌಂಡೇಶನ್ಸ್ ಹೇಳಿದೆ. ಅಲ್ಲದೆ, ಚರ್ಚ್ ನವೀಕರಣದ ದೇಣಿಗೆ ಸಂಗ್ರಹಿಸಲು ಕ್ರೌಡ್ಫಂಡಿಂಗ್ ಸಹ ಆರಂಭಿಸಲಾಗಿದೆ ಎನ್ನಲಾಗಿದೆ.
ಇನ್ನು ಚರ್ಚ್ ನಲ್ಲಿ ಉಂಟಾದ ಬೆಂಕಿ ಅವಘಡದ ಕುರಿತು ಮಾತನಾಡಿದನೋಟ್ರೆ-ಡೇಮ್ ಕ್ಯಾಥೆಡ್ರಲ್ ಚರ್ಚ್ ನ ಸಹಾಯಕ ಬಿಷಪ್ ಫಿಲಿಪ್ ಮಾರ್ಸೆಟ್ ಅವರು, ‘ಬೆಂಕಿಯ ಕೆನ್ನಾಲಿಗೆಗೆ ಚರ್ಚ್ ನೆಲಸಮವಾಗುವುದನ್ನು ಕಂಡ ಸಾರ್ವಜನಿಕರು ಕಣ್ಣೀರು ಸುರಿಸಿದ್ದರು. ಈ ಘಟನೆಯು ನಮ್ಮನ್ನು ತಬ್ಬಿಬ್ಬುಗೊಳಿಸಿದ ಘಟನೆಯಾಗಿದೆ. ಆದಾಗ್ಯೂ ನಾವು ವಿಚಲಿತರಾಗುವುದಿಲ್ಲ,’ ಎಂದರು.
ಚರ್ಚ್ ನ ಮೇಲ್ಛಾವಣಿ ಸಂಪೂರ್ಣ ನಾಶವಾಗಿದ್ದು,ಚರ್ಚ್ ನಲ್ಲಿ ಅಳವಡಿಸಲಾಗಿದ್ದ ಕಲಾಕೃತಿಗಳು ಹಾಗೂ ಪೇಂಟಿಂಗ್ಗಳು ಸಹ ಹಾನಿಗೊಳಗಾಗಿವೆ. ಆದರೆ, ಬೆಲ್ ಟವರ್ಗಳು ಮತ್ತು ಕಿಟಕಿಗ ಗಾಜುಗಳು ಉಳಿದುಕೊಂಡಿವೆ.