ಬಾಂಗ್ಲಾದೇಶ, ಏ 19(Daijiworld News/MSP): ಲೈಂಗಿಕ ಕಿರುಕುಳ ನೀಡುತ್ತಿದ್ದ ಮದರಸ ಶಾಲೆಯ ಮುಖ್ಯೋಪಾಧ್ಯಾಯನ ವಿರುದ್ದ, ದೂರು ನೀಡಿದ ಯುವತಿಯನ್ನು ಸಜೀವವಾಗಿ ದಹಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು, ಇದಕ್ಕೀಗಾ ದಕ್ಷಿಣ ಏಷ್ಯಾದಲ್ಲಿಯೇ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
19 ವರ್ಷದ ನುಸ್ರತ್ ಜಹಾನ್ ರಫಿಯ ಮದರಸಾದಲ್ಲಿ ಅಭ್ಯಾಸಿಸುತ್ತಿದ್ದು, ಮಾರ್ಚ್ 27ರಂದು ವಿದ್ಯಾರ್ಥಿಯನ್ನು ತನ್ನ ಕಚೇರಿಯ ಕೊಠಡಿಗೆ ಕರೆಯಿಸಿಕೊಂಡ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡತೊಡಗಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಆಕೆ ಕಾಮುಕನಿಂದ ತಪ್ಪಿಸಿಕೊಂಡು ಓಡಿದ್ದು, ಪೋಷಕರಲ್ಲಿ ಘಟನೆಯ ಬಗ್ಗೆ ವಿವರಿಸಿ, ಸಮೀಪದ ಪೊಲೀಸ್ ಠಾಣೆಗೆ ಪೋಷಕರ ಸಮೇತ ಹೋಗಿ ದೂರು ನೀಡಿದ್ದಾಳೆ. ಆದರೆ ಅಲ್ಲೂ ದೂರು ದಾಖಲಿಸಿಕೊಳ್ಳದ ಪೊಲೀಸರು ಆಕೆಯ ವಿರುದ್ಧವೇ ದೌರ್ಜನ್ಯ ಮುಂದಾಗಿದ್ದಾರೆ. ಕೊನೆಗೆ ಮದರಸದ ಮುಖ್ಯೋಪಾಧ್ಯಾಯನನ್ನು ಬಂಧಿಸಿದ್ದರು ಆತನ ಸಹಚರರ ಪ್ರತಿಭಟನೆಗೆ ಮಣಿದು ಆತನನ್ನು ಬಿಡುಗಡೆಗೊಳಿಸಿತ್ತು.
ಆದರೆ ಇದಾದ ಕೆಲವು ದಿನಗಳ ಬಳಿಕ ಪ್ರಕರಣ ವಾಪಾಸ್ ತೆಗೆದುಕೊಳ್ಳುವಂತೆ ನುಸ್ರತ್ ರಫಿ ವಿರುದ್ಧ ಮುಖ್ಯೋಪಾಧ್ಯಾಯ ಮತ್ತು ಆತನ ಬೆಂಬಲಿಗರು ಒತ್ತಡ ಹೇರಿದ್ದರು. ಆದರೆ ನುಸ್ರತ್ ನಿರಾಕರಿಸಿದಾಗ ಆಕೆಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಇಕ್ಬಾಲ್, 17 ಮಂದಿ ಯನ್ನು ಬಂಧಿಸಿದ್ದು ಎಲ್ಲರೂ ಮುಖ್ಯೋಪಾಧ್ಯಾಯ ಸೂಚನೆಯಂತೆ ಆಕೆಯನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.