ಮಾಲೆ, ಜ 14(DaijiworldNews/SK): ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯಿಂದಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಕಲಹ ಭುಗಿಲೆದ್ದಿದೆ. ಈ ಬೆಳವಣಿಗೆಯ ಹಿಂದೆಯೇ ಈಗ ಮಾಲ್ದೀವ್ಸ್ ಸರ್ಕಾರ, ತನ್ನ ದೇಶದಿಂದ ಭಾರತೀಯ ಸೇನೆಯನ್ನು ಮಾರ್ಚ್ 15 ರ ಒಳಗೆ ವಾಪಸು ಕರೆಯಿಸಿಕೊಳ್ಳಬೇಕು’ ಎಂದು ಮಾಲ್ದೀವ್ಸ್ನ ಅಧ್ಯಕ್ಷ ಮೊಹಮ್ಮದ್ ಮುಯಿಝ ಅವರು ಭಾರತ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ.
ಸನ್ ವರದಿಯಾ ಪ್ರಕಾರ ಭಾರತ ಸೇನೆಯ ಯೋಧರು ಮಾಲ್ದೀವ್ಸ್ನಲ್ಲಿ ಇರಲು ಅವಕಾಶವಿಲ್ಲ. ಇದು, ಅಧ್ಯಕ್ಷರು ಮತ್ತು ಅವರ ಸರ್ಕಾರದ ನಿರ್ಧಾರವಾಗಿದೆ’ ಎಂದು ಇಬ್ರಾಹಿಂ ಹೇಳಿದರೆಂದೂ ಸನ್ ವರದಿ ತಿಳಿಸಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಂ ಇಬ್ರಾಹಿಂ ಅವರು, ಸದ್ಯ, ಮಾಲ್ದೀವ್ಸ್ ನಲ್ಲಿ ಭಾರತೀಯ 88 ಯೋಧರು ಇದ್ದಾರೆ. ಅವರನ್ನು ಅದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಅಧ್ಯಕ್ಷರು ಆದೇಶಿಸಿದ್ದಾರೆ. ಈ ವಿಚಾರಕ್ಕೆ ದೇಶದ ಜನರ ಒಮ್ಮತವು ಇದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ ಎಂದು ವರದಿಯಾಗಿದೆ.