ಕೊಲಂಬೋ, ಏ 23 (Daijiworld News/MSP): ಈಸ್ಟರ್ ಭಾನುವಾರದ ದಿನ ಶ್ರೀಲಂಕಾದ ರಾಜಧಾನಿ ಕೊಲಂಬೋದ ಹಲವೆಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನಪ್ಪಿದವರ ಸಂಖ್ಯೆ 310 ಏರಿಕೆಯಾಗಿದೆ. ಶ್ರೀಲಂಕಾ ದೇಶವನ್ನೇ ಅಲ್ಲೋಲಕಲ್ಲೋಲ ಮಾಡಿದ ಘಟನೆ ಬಳಿಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಅವರು ದೇಶಾದ್ಯಂತ ತುರ್ತುಸ್ಥಿತಿ ಪೋಷಿಸಿದ್ದು, ಮಿಲಿಟರಿ ಪಡೆ ತಾತ್ಕಾಲಿಕವಗಿ ಪೊಲೀಸ್ ಅಧಿಕಾರವನ್ನು ನೀಡಲಾಗಿದೆ.
ಸ್ಥಳೀಯ ಮುಸ್ಲಿಂ ಉಗ್ರ ಸಂಘಟನೆ ನ್ಯಾಷನ್ಲ್ ತೌಹೀದ್ ಜಮಾತ್ (ಎನ್ ಟಿ ಜೆ) ಅಂತಾರಾಷ್ಟ್ರೀಯ ಉಗ್ರ ಸಂಘಟನೆ ನೆರವಿನಿಂದ ಸ್ಪೋಟ ನಡೆಸಿದೆ ಎಂದು ಹೇಳಲಾಗುತ್ತಿದೆ. ಅತ್ಮಾಹುತಿಗೆ ಸ್ಥಳೀಯ ಯುವಕರನ್ನೇ ಬಳಸಿರುವುದು ಈಗಾಗಲೇ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ 40 ಜನ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಲಂಕಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಸಾಮಾಜಿಕ ಜಾಲತಾಣ, ಸೈಟ್ ಗಳನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಇಂಟರ್ ಪೋಲ್ ಪ್ರಧಾನ ಕಾರ್ಯದರ್ಶಿ ಜುರ್ಗೇನ್ ಸ್ಟಾಕ್ ಶ್ರೀಲಂಕಾದ ಕೋರಿಕೆಯ ಮೇರೆಗೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಅನುಕೂಲವಾಗುವಂತೆ ತುರ್ತು ಸ್ಪಂದನಾ ಪಡೆ ನಿಯೋಜಿಸಲು ಸಿದ್ದವಿದೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಶ್ರೀಲಂಕಾದ ಮನವಿ ಮೇರೆಗೆ ಇಂಟರ್ ಪೋಲ್ ತನಿಖಾ ತಜ್ಞರ ತಂಡವೊಂದನ್ನು ಕೊಲಂಬೊಗೆ ಕಳುಹಿಸಿದೆ.