ಕೊಲಂಬೊ,23 (Daijiworld News/AZM): ಏ.21 ಭಾನುವರ ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿದೆ.
ಆತ್ಮಹತ್ಯಾ ಬಾಂಬರ್ಗಳು ''ಇಸ್ಲಾಮಿಕ್ ಸ್ಟೇಟ್ನ ಸೈನಿಕರು'' ಎಂಬ ಸಂದೇಶವೊಂದನ್ನು ಐಸಿಸ್ ತನ್ನ ಅಧಿಕೃತ ಸುದ್ದಿ ಸಂಸ್ಥೆ ಅಲ್-ಅಮಾಕ್ನಲ್ಲಿ ಹಾಕಿದೆ. ಆದರೆ, ಇದನ್ನು ಸಾಬೀತುಪಡಿಸಲು ಅದು ಯಾವುದೇ ಪುರಾವೆಯನ್ನು ನೀಡಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದಕ್ಕೂ ಮೊದಲು, ರವಿವಾರದ ಭಯಾನಕ ದಾಳಿಯ ಹಿಂದೆ ಐಸಿಸ್ ಇದೆ ಎಂಬುದನ್ನು ಸೂಚಿಸುವ ವೀಡಿಯೊವೊಂದನ್ನು ಐಸಿಸ್ಗೆ ಸೇರಿದ ಗುಂಪೊಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿತ್ತು. ಆ ವೀಡಿಯೊದಲ್ಲಿ ಮೂವರು ಆತ್ಮಹತ್ಯಾ ಬಾಂಬರ್ಗಳ ಚಿತ್ರಗಳಿದ್ದವು.
ಶ್ರೀಲಂಕಾದಲ್ಲಿ ನಡೆದ ದಾಳಿಗಳು ಐಸಿಸ್ ಕೃತ್ಯಗಳ ಕೆಲವು ಲಕ್ಷಣಗಳನ್ನು ಹೊಂದಿವೆ ಎಂಬುದಾಗಿ ಅಮೆರಿಕದ ಗುಪ್ತಚರ ಮೂಲಗಳು ಹೇಳಿದ್ದವು.