ವಾಷಿಂಗ್ಟನ್,ಜ 29 (DaijiworldNews/HR): ಭಾರತೀಯ ಮೂಲದ ವಿದ್ಯಾರ್ಥಿಯನ್ನು ನಿರಾಶ್ರಿತ ಮಾದಕ ವ್ಯಸನಿಯೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಭಾರತೀಯ ವಿದ್ಯಾರ್ಥಿ, ಜಾರ್ಜಿಯಾದ ಕನ್ವೀನಿಯನ್ಸ್ ಸ್ಟೋರ್ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿವೇಕ್ ಸೈನಿ ಎಂದು ಗುರುತಿಸಲಾಗಿದೆ.
ವಿವೇಕ್ ಸೈನಿ ಅಂಗಡಿಯಿಂದ ಹೊರಹೋಗುವಂತೆ ಕೇಳಿಕೊಂಡ ಬಳಿಕ ನಿರಾಶ್ರಿತ ವ್ಯಕ್ತಿ ತಡರಾತ್ರಿಯಲ್ಲಿ ಸುತ್ತಿಗೆಯಿಂದ ಕ್ರೂರವಾಗಿ ಹಲ್ಲೇ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸೈನಿ ಸೇರಿದಂತೆ ಫುಡ್ ಮಾರ್ಟ್ನಲ್ಲಿನ ಉದ್ಯೋಗಿಗಳು ಜೂಲಿಯನ್ ಫಾಕ್ನರ್ ಎಂದು ಗುರುತಿಸಲ್ಪಟ್ಟ ನಿರಾಶ್ರಿತ ವ್ಯಕ್ತಿಗೆ ಆಹಾರ ಮತ್ತು ಆಶ್ರಯ ನೀಡುತ್ತಿದ್ದರು. ಆ ನಿರಾಶ್ರಿತ ವ್ಯಕ್ತಿ ಚಿಪ್ಸ್ ಮತ್ತು ಕೋಕ್ ಕೇಳಿದ್ದು, ನಾವು ಅವನಿಗೆ ನೀರು ಸೇರಿದಂತೆ ಎಲ್ಲವನ್ನೂ ನೀಡಿದ್ದೇವೆ ಎಂದು ಫುಡ್ ಮಾರ್ಟ್ನಲ್ಲಿನ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಇನ್ನು ಕೊಲೆ ಮಾಡಿದ ಫಾಕ್ನರ್ ನನಗೆ ಕಂಬಳಿ ಸಿಗಬಹುದೇ ಎಂದು ನಮ್ಮನ್ನು ಕೇಳಿದ್ದ. ಆಗ ನಾವು ಹೊದಿಕೆ ಇಲ್ಲ ಎಂದು ನಾನು ಅವನಿಗೆ ಜಾಕೆಟ್ ಕೊಟ್ಟೆ. ಅವನು ಸಿಗರೇಟ್, ನೀರು ಮತ್ತು ಎಲ್ಲವನ್ನೂ ಕೇಳುತ್ತಾ ಒಳಗೆ ಮತ್ತು ಹೊರಗೆ ನಡೆಯುತ್ತಿದ್ದನು. ಆತ ನಿತ್ಯವೂ ಇಲ್ಲಿಯೇ ಕುಳಿತುಕೊಳ್ಳುತ್ತಿದ್ದ ಹೊರಗೆ ಚಳಿ ಇರುವುದರಿಂದನಾವು ಅವರನ್ನು ಹೊರಗೆ ಹೋಗುವಂತೆ ಹೇಳುತ್ತಿರಲಿಲ್ಲ. ಆದರೆ ನಿನ್ನೆ ಸೈನಿ ತಾನು ಹೊರಡಬೇಕಾಗಿದೆ, ಹೊರಗೆ ಹೋಗಿ ಇಲ್ಲದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದರಿಂದ ಕೋಪಗೊಂಡ ಫಾಕ್ನರ್ ಸೈನ್ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಸುತ್ತಿಗೆಯಿಂದ ಆತನ ಮೇಲೆ ಹಲ್ಲೆ ನಡೆಸಿ ತಲೆಯ ಮೇಲೆ ಸುಮಾರು 50 ಬಾರಿ ಮುಖಕ್ಕೆ ಹೊಡೆಯುತ್ತಲೇ ಇದ್ದ ಫುಡ್ ಮಾರ್ಟ್ನಲ್ಲಿನ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.