ಮಾಸ್ಕೊ, ಜ 29 (DaijiworldNews/SK): 2024 ಮಾರ್ಚ್ 15 ರಿಂದ 17 ರವರೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೇಂದ್ರೀಯ ಚುನಾವಣಾ ಆಯೋಗ ಹೇಳಿರುವುದಾಗಿ ಇಂಟ್ರಾಫ್ಯಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮೂಲಕ ತಿಳಿಸಿದೆ.
ಈ ವರದಿಯಾ ಪ್ರಕಾರ, ಆರು ವರ್ಷಗಳ ಅಧಿಕಾರವಧಿಯ ಅಧ್ಯಕ್ಷ ಸ್ಥಾನಕ್ಕೆ ಪುಟಿನ್ ಮತ್ತೋಮ್ಮೆ ಆಯ್ಕೆಯಾದಲ್ಲಿ 18ನೇ ಶತಮಾನದ ನಂತರ ಅತಿ ದೀರ್ಘಕಾಲ ಅಧಿಕಾರದಲ್ಲಿದ್ದವರ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುತ್ತಾರೆ ಎಂದು ವರದಿಯಾಗಿದೆ.
ಇನ್ನು ಈ ಚುನಾವಣೆಯಲ್ಲೂ ಪುಟಿನ್ ಅವರೇ ಅಧಿಕಾರ ಪಡೆಯುತ್ತಾರೆ ಎಂದು ಅವರ ಬೆಂಬಲಿಗರು ಮಾತ್ರವಲ್ಲ ವಿರೋಧಿಗಳೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 1999ರಿಂದ ಪುಟಿನ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. 1999ರಲ್ಲಿ ಮೂರು ತಿಂಗಳು ಪ್ರಭಾರ ಅಧ್ಯಕ್ಷರಾಗಿದ್ದಾರೆ. ನಂತರ 2000–2004, 2004 ರಿಂದ 2008, 2012–2018, 2018ರಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದೆ.