ಜಪಾನ್, ಫೆ (DaijiworldNews/SK): ಕೊರೊನಾ ಬಳಿಕ ಏವಿಯನ್ ಫ್ಲೂ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಜಪಾನ್ನಲ್ಲಿ ಸುಮಾರು 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಜಪಾನ್ ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್ನಲ್ಲಿ ಏವಿಯನ್ ಇನ್ಫ್ಲುಯೆಂಜಾ ಕಾಣಿಸಿಕೊಂಡಿದೆ. ಈ ಫ್ಲೂ ಕಾಣಿಸಿಕೊಂಡಂತೆ ಹತ್ತಿರದ ಫಾರ್ಮ್ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ. 3 ಕಿ.ಮೀನಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ 15 ಫಾರ್ಮ್ಗಳಲ್ಲಿ ಸುಮಾರು 3,63,00 ಕೋಳಿಗಳನ್ನು ಸಾಕಲು ನಿರ್ಬಂಧ ವಿಧಿಸಲಾಗಿದೆ.
ಜಪಾನ್ನಲ್ಲಿ ಪ್ರತಿ ವರ್ಷ ಅಕ್ಟೋಬರ್ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ26 ಫಾರ್ಮ್ಗಳಲ್ಲಿ ಈ ಪ್ಲೂ ಕಾಣಿಸಿಕೊಂಡಿತ್ತು. ಇದರಿಂದಾಗಿ 17.71 ಮಿಲಿಯನ್ ಪಕ್ಷಿಗಳನ್ನು ಕೊಲ್ಲಲಾಗಿದ್ದು, ಇದರಿಂದಾಗಿ ಜಪಾನ್ನಲ್ಲಿ ಮೊಟ್ಟೆಯ ಕೊರತೆ ಹಾಗೂ ಬೆಲೆ ಏರಿಕೆಯಾಗಿದೆ ಎಂದು ವರದಿಯಾಗಿದೆ.