ಟೋಕಿಯೊ, ಮಾ 20(DaijiworldNews/ AK): ದಕ್ಷಿಣ ಕೊರಿಯಾದ ಕೆಮಿಕಲ್ ಟ್ಯಾಂಕರ್ ಹಡಗು ಬುಧವಾರ ನೈರುತ್ಯ ಜಪಾನ್ ದ್ವೀಪದಲ್ಲಿ ಮುಳುಗಿ
ಹಿನ್ನಲೆ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ಸಿಬಂದಿ ಪಾರಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಟ್ಯಾಂಕರ್ 980 ಟನ್ ಅಕ್ರಿಲಿಕ್ ಆಮ್ಲವನ್ನು ಸಾಗಿಸುತ್ತಿತ್ತು, ಇದು ಅಂಟುಗಳು, ಬಣ್ಣಗಳು ಮತ್ತು ಪಾಲಿಶ್ಗಳಲ್ಲಿ ಬಳಸಲಾಗುವ ನಾಶಕಾರಿ ಸಾವಯವ ಮಿಶ್ರಣವಾಗಿದೆ.
ಯಾವುದೇ ಸೋರಿಕೆ ಪತ್ತೆಯಾಗಿಲ್ಲ, ಸೋರಿಕೆಯಾದಲ್ಲಿ ಯಾವ ಪರಿಸರ ಸಂರಕ್ಷಣ ಕ್ರಮಗಳ ಅಗತ್ಯವಿದೆ ಎಂದು ಅಧ್ಯಯನ ಮಾಡುತ್ತಿದ್ದಾರೆ.
ನೈರುತ್ಯ ಜಪಾನ್ ಟೋಕಿಯೊದಿಂದ ಸುಮಾರು 1,000 ಕಿಮೀ ದೂರದಲ್ಲಿರುವ ಜಪಾನ್ನ ಮುಟ್ಸೂರ್ ದ್ವೀ ಪದ ಬಳಿ ಟ್ಯಾಂ ಕರ್ ವಾಲುತ್ತಿದೆ ಎಂದು ಜಪಾನ್ ಕೋಸ್ಟ್ ಗಾರ್ಡ್ ಕೆಮಿಕಲ್ ಟ್ಯಾಂಕರ್ ಕಿಯೋಯಂಗ್ ಸನ್ನಿಂದ ತುರ್ತು ಕರೆ ಸ್ವೀಕರಿಸಿತ್ತು. ಆದರೆ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಹಡಗು ಸಂಪೂರ್ಣ ಮುಳುಗಿತ್ತು.
ಹಡಗಿನಲ್ಲಿದ್ದ 11 ಸಿಬಂದಿಯಲ್ಲಿ ಒಂಬತ್ತು ಮಂದಿ ಶವಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಒಬ್ಬ ಸಿಬಂದಿ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಕೋಸ್ಟ್ ಗಾರ್ಡ್ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.