ಇಸ್ಲಾಮಾಬಾದ್, ಮಾ 31(DaijiworldNews/AK): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಅನಗತ್ಯ ವೆಚ್ಚ ತಗ್ಗಿಸುವ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮಗಳಲ್ಲಿ ರೆಡ್ ಕಾರ್ಪೆಟ್ ಬಳಸುವಂತಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಆದೇಶ ಹೊರಡಿಸಿದ್ದಾರೆ.
ರಾಜತಾಂತ್ರಿಕ ಅಧಿಕಾರಿಗಳು ಅಥವಾ ರಾಯಭಾರಿಗಳು ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಶಿಷ್ಟಾಚಾರವಾಗಿ ರೆಡ್ ಕಾರ್ಪೆಟ್ ಬಳಸುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.
ರೆಡ್ ಕಾರ್ಪೆಟರ್ ಬಳಕೆಯನ್ನು ನಿಷೇಧಿಸುವ ಮೂಲಕ, ಸರ್ಕಾರವು ಹಣವನ್ನು ಉಳಿಸುವ ಗುರಿಯನ್ನು ಹೊಂದಿದೆ ಮತ್ತು ಸಾರ್ವಜನಿಕರ ಹಣವನ್ನು ಜವಾಬ್ದಾರಿಯುತವಾಗಿ ಬಳಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ಕಳೆದ ತಿಂಗಳು, ದೇಶದಲ್ಲಿನ ಹಣಕಾಸು ಮುಗ್ಗಟ್ಟನ್ನು ಪರಿಹರಿಸಲು ಮಿತವ್ಯಯದ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾ ರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಷರೀಫ್ ಹೇಳಿದ್ದರು. ಇದರ ಬೆನ್ನಲ್ಲೇ ಕಳೆದ ವಾರ, ಪ್ರಧಾನಿ ಷರೀಫ್ ಮತ್ತು ಸಂ ಪುಟ ಸದಸ್ಯರು ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಿದ್ದರು.