ಕೀವ್, ಏ 08 (DaijiworldNews/AA): ರಷ್ಯಾದ ಝಪೋರಿಝಿವಾ ಅಣುಶಕ್ತಿ ಸ್ಥಾವರದ 6 ನ್ಯೂಕ್ಲಿಯರ್ ರಿಯಾಕ್ಟರ್ ಗಳ ಪೈಕಿ ಒಂದರ ಮೇಲೆ ಉಕ್ರೇನ್ ಕನಿಷ್ಠ 3 ನೇರ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಾವರದ ಅಧಿಕಾರಿಗಳು ಝಪೋರಿಝಿವಾದ ಪ್ರಮುಖ ರಿಯಾಕ್ಟರ್ ಮೇಲೆ ದಾಳಿ ನಡೆದಿದೆ. 2022 ರ ನವೆಂಬರ್ ಬಳಿಕ ಸ್ಥಾವರದ ಮೇಲೆ ನಡೆದ ಪ್ರಮುಖ ದಾಳಿ ಇದಾಗಿದೆ. ಗಂಭೀರ ಪರಮಾಣು ಅವಘಡವನ್ನು ತಪ್ಪಿಸಲು 5 ತತ್ವಗಳನ್ನು ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
6 ನೇ ಘಟಕದ ಡೋಮ್ ಗೆ ಹಾನಿಯಾಗಿದೆ. ಈ ಘಟಕದಲ್ಲಿ ಉಂಟಾಗಿರುವ ಹಾನಿಯು ಪರಮಾಣು ಸುರಕ್ಷತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದೊಂದು ಗಂಭೀರವಾದ ದಾಳಿಯಾಗಿದ್ದು, ರಿಯಾಕ್ಟರ್ ವ್ಯವಸ್ಥೆಯನ್ನು ನಾಶಗೊಳಿಸುವ ಶಕ್ತಿ ಹೊಂದಿದೆ. ಇನ್ನು ದಾಳಿಯ ಬಳಿಕವೂ ರೇಡಿಯೇಶನ್ ಮಟ್ಟವೂ ಸಾಮಾನ್ಯವಾಗಿದೆ ಎಂದು ಸ್ಥಾವರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.