ವಿಯೆಟ್ನಾಂ, ಏ 13 (DaijiworldNews/MS): ವಿಯೆಟ್ನಾಂನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಲಿಯನೇರ್ ಟ್ರೂಂಗ್ ಮೈ ಲ್ಯಾನ್ ಗೆ ಮರಣದಂಡನೆ ವಿಧಿಸಲಾಗಿದೆ. ರಿಯಲ್ ಎಸ್ಟೇಟ್ ಕ್ವೀನ್ ಎನಿಸಿಕೊಂಡಿದ್ದ ಟ್ರೌಂಗ್ ಮೈ ಲ್ಯಾನ್ ಶತಕೋಟಿ ಡಾಲರ್ ವಂಚನೆ ಪ್ರಕರಣದಲ್ಲಿಈ ಶಿಕ್ಷೆಗೆ ಗುರಿಯಾಗಿದ್ದಾರೆ.
ಇದು ಇಡೀ ವಿಯೆಟ್ನಾಂ ದೇಶದ ಅತೀದೊಡ್ಡ ಹಣಕಾಸು ವಂಚನೆ ಎಂದೇ ಹೇಳಲಾಗಿದೆ. ತಮ್ಮ ನಿಯಂತ್ರಣದಲ್ಲಿ ಬ್ಯಾಂಕ್ "ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ " ನಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಈಕೆಯ ಮೇಲಿತ್ತು. ಸುಮಾರು 12.5 ಶತಕೋಟಿ ಡಾಲರ್ (1.04 ಲಕ್ಷ ಕೋಟಿ ರೂ.) ವಂಚನೆ ಆರೋಪ ಈಕೆ ಮೇಲೆ ಕೇಳಿಬಂದಿದೆ.
ಟ್ರೂಂಗ್ ಮೈ ಲ್ಯಾನ್ 2012ರಿಂದ 2022ರವರೆಗೆ ವಿಯೇಟ್ನಾಂನ ಸೈಗೋನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ನ ಷೇರುಗಳ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದ್ದರು. ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಬ್ಯಾಂಕ್ನ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿದ್ದರು.
ಈಕೆಯ ಮೇಲಿನ ಆರೋಪ ಸಾಬೀತಾಗಿದ್ದು ಹೋ ಚಿ ಮಿನ್ಹ್ ನಗರದ ಕೋರ್ಟ್ ಈಕೆಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಲ್ಯಾನ್ನ ಪತಿ ಎರಿಕ್ ಚು ಒಂಬತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಅವಳ ಸೋದರ ಸೊಸೆಗೆ 17 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ.