ದುಬೈ, ಏ 19 (DaijiworldNews/MS): ದುಬೈ 2014 ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷಾ ಬೋಧನೆಯನ್ನು ಉಚಿತವಾಗಿ ಮಾಡುತ್ತಾ ಬಂದಿರುವ ಕನ್ನಡ ಮಿತ್ರರು ಯುಎಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ಗೆ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆಯಾಗಿರುವ ಈ ಶಾಲೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾವು ಮನ್ನಣೆ ಪತ್ರನೀಡಿ ವಿದೇಶದಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡಿದೆ.
ಕನ್ನಡ ಪಾಠ ಶಾಲೆ ದುಬೈನಲ್ಲಿ ಅಭ್ಯಾಸ ಮಾಡಿ ವಾರ್ಷಿಕ ಪರೀಕ್ಷೆಯ್ಲಲಿ ತೇರ್ಗಡೆಯಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರ್ಕಾರದ ಲಾಂಛನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳ ಸಹಿ ಇರುವ ಪ್ರಮಾಣ ಪತ್ರ ನೀಡಲಾಗುವುದು ಎಂದು ಕನ್ನಡ ಮಿತ್ರರು ಯು ಎ ಇ ರೂವಾರಿ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ
ಕನ್ನಡ ಪಾಠ ಶಾಲೆ ದುಬೈ ನ ಆಯೋಜಕರ ನಿಯೋಗವು ಏಪ್ರಿಲ್ ೧೦ರಂದು ಸಚಿವರಾದ ಶ್ರೀ ಶಿವರಾಜ್ ತಂಗಡಗಿ ರವರನ್ನು ಭೇಟಿ ನೀಡಿ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿದ್ದು, ತಮ್ಮ ನಿಸ್ವಾರ್ಥ ಕನ್ನಡ ಸೇವೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರಾವೆಗಳ ಸಮೇತವಾಗಿ ನಿರೂಪಿಸಿದ ಫಲವಾಗಿ ಮನ್ನಣೆ ದೊರೆತಿದೆ
ಕನ್ನಡ ಪಾಠ ಶಾಲೆ ದುಬೈ ಬಗ್ಗೆ ಸಂಪೂರ್ಣ ಅರಿವಿರುವ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯೆಕ್ಷೆ ಡಾ ಆರತಿ ಕೃಷ್ಣ ರವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ರವರಿಗೆ ಈ ಬಗ್ಗೆ ವಿವರಿಸಿದ್ದು ಅಧಿಕೃತ ಮನ್ನಣೆಗೆ ಸಹಕಾರಿಯಾಗಿದೆ ಎಂದು ಕನ್ನಡ ಪಾಠ ಶಾಲೆ ದುಬೈ ನ ಅಧ್ಯಕ್ಷ. ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.
ಕನ್ನಡ ಮಿತ್ರರು ಯು ಎ ಇ ನಿಯೋಗ ಸದಸ್ಯರಾದ ಸಿದ್ದಲಿಂಗೇಶ್ ರೇವಪ್ಪ , ಸುನಿಲ್ ಗವಾಸ್ಕರ್ , ನಾಗರಾಜ್ ರಾವ್, ಚಂದ್ರಶೇಖರ ಸಂಕೋಲೆ ಮತ್ತು ಕೊಟ್ರೇಶ್ ಯಾರ್ಲಾಗಟ್ಟಿ ತಮ್ಮ ಶ್ರಮ ಫಲಕೊಟ್ಟ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ