ವಾಷಿಂಗ್ಟನ್, ಜೂ. 17(DaijiworldNews/AA): ಖಲಿಸ್ತಾನ್ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತಾನನ್ನು ಜೆಕ್ ಗಣರಾಜ್ಯದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಪನ್ನುನ್ನ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಯುಎಸ್ ಸರ್ಕಾರದ ಕೋರಿಕೆಯ ಮೇರೆಗೆ ನಿಖಿಲ್ ಗುಪ್ತಾ(52) ಅವರನ್ನು ಕಳೆದ ವರ್ಷ ಜೆಕ್ ರಿಪಬ್ಲಿಕ್ನಲ್ಲಿ ಬಂಧಿಸಲಾಯಿತ್ತು. ಅಂದಿನಿಂದ ನಿಖಿಲ್ ನನ್ನು ಪ್ರೇಗ್ನ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಅವರನ್ನು ಅಮೆರಿಕಕ್ಕೆ ಕರೆತರಲಾಗಿದ್ದು ಅದರಂತೆ ಇಂದು ನ್ಯೂಯಾರ್ಕ್ ನ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು.
ಗುರುಪತ್ವಂತ್ ಸಿಂಗ್ ಪನ್ನುನ್ನನ್ನು ಹತ್ಯೆ ಮಾಡಲು ನಿಖಿಲ್ ಗುಪ್ತಾ ವ್ಯಕ್ತಿಯೊಬ್ಬರಿಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಅಲ್ಲದೆ ಆತನಿಗೆ ಮುಂಗಡವಾಗಿ 15,000 ಡಾಲರ್ ನೀಡಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಅನಾಮಧೇಯ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪ ಮಾಡಲಾಗಿದೆ. ಆದರೆ ಭಾರತ ಈಗಾಗಲೇ ಈ ಆರೋಪಗಳನ್ನು ತಳ್ಳಿ ಹಾಕಿರುವ ಜತೆಗೆ ನಿಖಿಲ್ ಗುಪ್ತಾ ಕೂಡ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾನೆ.
ಮಾಹಿತಿಯ ಅನುಸಾರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಸ್ತಾಂತರಗೊಂಡವರನ್ನು ಒಂದು ದಿನದ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಆದರೆ ನಿಖಿಲ್ ವಿಚಾರದಲ್ಲಿ ಹಾಗೆ ಆಗಲಿಲ್ಲ ಕೆಲವೊಂದು ಅಗತ್ಯ ತನಿಖೆಗಳು ನಡೆಯುತ್ತಿರಬಹುದು ಹಾಗಾಗಿ ಕೋರ್ಟ್ ಗೆ ಹಾಜರುಪಡಿಸಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.