ಇಸ್ಲಾಮಾಬಾದ್, ಜೂ 27 (DaijiworldNews/ AK): ಅಕ್ರಮ ವಿವಾಹ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋ ರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿ ಯನ್ನು ಪಾಕಿಸ್ತಾನದ ಜಿಲ್ಲಾ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ಇದ್ದತ್ ಪ್ರಕರಣ ಎಂದೇ ಹೇಳಲಾದ ಇದರಲ್ಲಿ ದಂಪತಿಗೆ ಏಳು ವರ್ಷ ಜೈಲು ಹಾಗೂ 5 ಲಕ್ಷ ಪಾಕಿಸ್ತಾನದ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಕಳೆದ ಫೆ. 3ರಂದು ಆದೇಶಿಸಿತ್ತು.
ಇಸ್ಲಾಂನಲ್ಲಿ ಮರು ವಿವಾಹಕ್ಕೆ ಸಿದ್ಧವಾಗುವ ಮಹಿಳೆಯು ಪತಿಯಿಂದ ವಿಚ್ಛೇ ದನ ಪಡೆಯುವವರೆಗೂ ಅಥವಾ ಪತಿ ಮೃತರಾಗುವವರೆಗೂ ಕಾಯಬೇಕಾದ್ದು ಕಡ್ಡಾಯ ಎಂದು ಹೇಳಲಾಗಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟು ಕೊಂಡ ನ್ಯಾಯಾಲಯ, ವಾದ ಪ್ರತಿವಾದ ಆಲಿಸಿ ಆದೇ ಶ ಕಾಯ್ದಿರಿಸಿತ್ತು.ದಂಪತಿ ಸಲ್ಲಿಸಿದ ಅರ್ಜಿ ಯನ್ನು ನ್ಯಾಯಾಧೀ ಶರು ತಿರಸ್ಕರಿಸಿದರು.
ರಾವಲ್ಪಿಂಡಿಯಲ್ಲಿರುವ ಅದಿಯಾಲ ಜೈಲಿನಲ್ಲಿರುವ ದಂಪತಿಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದವರಿಗೆ, ಈ ಆದೇಶ ತೀವ್ರ ನಿರಾಸೆ ಉಂಟು ಮಾಡಿದೆ. 71 ವರ್ಷದ ಇಮ್ರಾನ್ ಖಾನ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇವರ ಪತ್ನಿ ಬುಶ್ರಾ (49) ವಿರುದ್ಧವೂ ಹಲವು ಪ್ರಕರಣಗಳಿವೆ.