ಮಾಲೆ, ಜೂ.29(DaijiworldNews/AA): ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ವಿರುದ್ಧ ವಾಮಾಚಾರ ಮಾಡಿದ ಆರೋಪದ ಮೇರೆಗೆ ಸಚಿವೆಯೊಬ್ಬರನ್ನು ಬಂಧಿಸಲಾಗಿದೆ.
ಮಾಲ್ಡೀವ್ಸ್ ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಖಾತೆ ರಾಜ್ಯ ಸಚಿವೆ ಫತೀಮತ್ ಶಮ್ನಾಜ್ ಅಲಿ ಸಲೀಂ ಬಂಧಿತ ಸಚಿವೆಯಾಗಿದ್ದಾರೆ.
ಮಾಲ್ಡೀವ್ಸ್ ಸಚಿವೆ ಫಾತಿಮತ್ ಶಮ್ನಾಜ್ ಅವರು ಅಧ್ಯಕ್ಷ ಮೊಯಿಝು ವಿರುದ್ಧ ಮಾಟ ಮಂತ್ರ ಮಾಡಿಸಿದ್ದಾರೆ. ಹೀಗಾಗಿ ಅವರನ್ನು ಮಾಲ್ಡೀವ್ಸ್ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಸಚಿವೆಯೊಂದಿಗೆ ಆಕೆಯ ಇಬ್ಬರು ಸೋದರಿಯರನ್ನು ಮಾಲೆಯಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇನ್ನು ಶಮ್ನಾಜ್ ಅವರು ವಾಮಾಚಾರ ಮಾಡಿದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು, ಶಮ್ನಾಜ್ ಮಾಜಿ ಗಂಡ ಅದಂ ರಮೀಜ್ ಅವರು ಸಹ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೇ ತಿಂಗಳ ಹಿಂದೆ ಮೊಯಿಝು ಅವರನ್ನು ಅಮಾನತು ಮಾಡಿದ್ದರು. ಇದರೊಂದಿಗೆ ಫಾತಿಮತ್ ಅವರಿಗೆ ಮಾಟ ಮಂತ್ರದಲ್ಲಿ ಅಪಾರ ನಂಬಿಕೆ ಇತ್ತು. ವಾಮಾಚಾರ ಮಾಡಿಸಿದರೆ ತನಗೆ ಸದ್ಯ ಇರುವ ಕ್ಯಾಬಿನೆಟ್ ಖಾತೆಯ ಬದಲು ಇನ್ನೂ ಅತ್ಯುನ್ನತವಾದ ಖಾತೆಯೇ ಸಿಗುತ್ತದೆ ಅನ್ನೋ ನಂಬಿಕೆ ಇತ್ತು. ಈ ಎಲ್ಲಾ ಕಾರಣಗಳಿಗಾಗಿ ಸಚಿವೆ ವಾಮಾಚಾರ ಮಾಡಿರುವುದು ಬಯಲಾಗಿದೆ.