ಸಿಯೋಲ್, ಜು.01(DaijiworldNews/AA): ಕೆ-ಪಾಪ್ ಹಾಡು ಕೇಳಿದ ಅಪರಾಧಕ್ಕೆ ಸಾರ್ವಜನಿಕವಾಗಿ 22 ವರ್ಷದ ಯುವಕನ ಶಿರಚ್ಛೇದ ಮಾಡಿದ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ತಿಳಿಸಿದೆ.
ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ದಕ್ಷಿಣ ಹ್ವಾಂಗೇ ಪ್ರಾಂತದ ಯುವಕನೊಬ್ಬ 70 ಕೊರಿಯನ್ ಹಾಡುಗಳು, 3 ಸಿನೆಮಾ ನೋಡಿದ್ದು ಹಾಗೂ ಹಂಚಿಕೊಂಡಿದ್ದ ಕ್ಕಾಗಿ 2022ರಲ್ಲಿ, ಉತ್ತರ ಕೊರಿಯಾ ಆಡಳಿತ ಆತನ ಶಿರಚ್ಛೇದ ಮಾಡಿದೆ ಎಂದು ಹೇಳಿದೆ.
ಉತ್ತರ ಕೊರಿಯಾದಲ್ಲಿ 2020ರಲ್ಲಿ ಪ್ರತಿಗಾಮಿ ಸಿದ್ಧಾಂತ ಹಾಗೂ ಸಂಸ್ಕೃತಿ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಪ್ರಕಾರ ದಕ್ಷಿಣ ಕೊರಿಯಾದ ಪಾಪ್ ಸಂಸ್ಕೃತಿಯನ್ನು ಉತ್ತರ ಕೊರಿಯಾ ನಿರ್ಬಂಧಿಸಿದೆ. ಯುವಕ ಈ ಕಾನೂನನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಪಾಶ್ಚಾತ್ಯರ ಭ್ರಷ್ಟ ಸಂಸ್ಕೃತಿಯಿಂದ ಉತ್ತರ ಕೊರಿಯನ್ನರನ್ನು ರಕ್ಷಿಸುವ ಅಭಿಯಾನದ ಭಾಗವಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಕೆ-ಪಾಪ್, ಕೆ-ಡ್ರಾಮಗಳು ದಕ್ಷಿಣ ಕೊರಿಯಾದ ಮನೋರಂಜನೆಯ ರೂಪಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಇವುಗಳು ಇಡೀ ವಿಶ್ವದ ಜನರನ್ನು ತನ್ನತ್ತ ಸೆಳೆದಿದ್ದು, ಅದರಲ್ಲೂ ಸಾಕಷ್ಟು ಯುವಕರೇ ಇವುಗಳಿಗೆ ಅಭಿಮಾನಿಗಳಾಗಿದ್ದಾರೆ.