ವಾಷಿಂಗ್ಟನ್, ಜು.02(DaijiworldNews/AK): ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ವಿಮಾನದಲ್ಲಿ ವಲಸಿಗ ಚೀನಿಯರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ.
ಕಾನೂನುಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರನ್ನು ಗಡೀ ಪಾರು ಮಾಡಲು ನಿರಂ ತರವಾಗಿ ನಮ್ಮ ವಲಸೆ ಕಾನೂನನ್ನು ಜಾರಿಗೊಳಿಸುತ್ತಿರುತ್ತೇವೆ ಎಂ ದು
ಹೋಮ್ಲ್ಯಾಂಡ್ ಕಾರ್ಯದರ್ಶಿ ಅಲೆಜಾಂಡ್ರೊ ಮಯೊರ್ಕಾಸ್ ಹೇಳಿದ್ದಾರೆ.
ಅನಿಯಮಿತ ವಲಸೆಯನ್ನು ನಿಯಂತ್ರಿಸಲು ಹಾಗೂ ವಿಸ್ತೃ ತ ಕಾನೂನು ಜಾರಿ ತರುವ ಪ್ರಯತ್ನಗಳ ಮೂಲಕ ಅಕ್ರಮ ಮಾನವ ಕಳ್ಳಸಾಗಣೆಗೆ ಕಡಿವಾಣ ಹಾಕಲು ಚೀನಾ ಜೊತೆ ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಹೇಳಿದೆ.
ಚೀನಾದ ಅಕ್ರಮ ವಲಸಿಗರನ್ನು ಅವರ ದೆಶಕ್ಕೆ ಕಳುಹಿಸುವುದೇ ಅಮೆರಿಕಕ್ಕೆ ದೊಡ್ಡ ಸವಾಲಾಗಿತ್ತು. ವಲಸಿಗರನ್ನು ದೇಶಕ್ಕೆ ಸೇರಿಸಿಕೊಳ್ಳಲು ಚೀನಾ ಆಡಳಿತ ಹಿಂದೇಟು ಹಾಕಿತ್ತು. ಕಳೆದ ವರ್ಷ ಮೆಕ್ಸಿಕೊ ಮೂಲಕ ಭಾರಿ ಪ್ರಮಾಣದ ಚೀನಾ ವಲಸಿಗರು ಅಮೆರಿಕಕ್ಕೆ ಬಂದಿರುವುದು ಗಮನಕ್ಕೆ ಬಂದಿತ್ತು.