ಲಂಡನ್, ಜು 11(DaijiworldNews/ AK):ಯುಕೆ ಸಂಸತ್ತಿನಲ್ಲಿ ಭಾರತೀಯ ಮೂಲದ ಶಿವಾನಿ ರಾಜಾ ಅವರು ಭಗವದ್ಗೀತೆಯನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗುಜರಾತ್ ಮೂಲದ 29 ವರ್ಷದ ಶಿವಾನಿ ಅವರು ಉದ್ಯಮಿಯಾಗಿದ್ದು, ಲೀಸೆಸ್ಟರ್ ಪೂರ್ವ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕೆ ಇಳಿದು ಐತಿಹಾಸಿಕ ಗೆಲುವು ಸಾಧಿಸಿದ್ದರು.
27 ವರ್ಷಗಳಿಂದ ಈ ಕ್ಷೇತ್ರ ಲೇಬರ್ ಪಕ್ಷದ ಹಿಡಿತದಲ್ಲಿತ್ತು. ಆದರೆ ಶಿವಾನಿ ಅವರು ಭಾರತೀಯ ಮೂಲದ ರಾಜೇಶ್ ಅಗರ್ವಾಲ್ ಅವರನ್ನು ಸೋಲಿಸಿ ಸಂಸತ್ತಿಗೆ ಆಯ್ಕೆ ಆಗಿದ್ದರು.
ಶಿವಾನಿ ರಾಜಾ 14,526 ಮತಗಳನ್ನು ಪಡೆದರೆ ಲಂಡನ್ನ ಮಾಜಿ ಉಪಮೇಯರ್ ಅಗರವಾಲ್ ಅವರನ್ನು 10,100 ಮತಗಳನ್ನು ಪಡೆದರು.
ಯುನೈಟೆಡ್ ಕಿಂಗ್ಡಂನಲ್ಲಿ ಜುಲೈ 4 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಾನಿ ಅವರನ್ನು ಹೊರತುಪಡಿಸಿ 27 ಭಾರತೀಯ ಮೂಲದ ಸದಸ್ಯರು ಹೌಸ್ ಆಫ್ ಕಾಮನ್ಸ್ಗೆ ಆಯ್ಕೆಯಾಗಿದ್ದಾರೆ.