ವಾಷಿಂಗ್ಟನ್, ಜು. 15(DaijiworldNews/AA): ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಶೂಟರ್ ಗುರುತನ್ನು ಅಮೆರಿಕದ ಗುಪ್ತಚರ ಇಲಾಖೆ ಎಫ್ಬಿಐ ಪತ್ತೆ ಮಾಡಿದ್ದು, ಇದೀಗ ಆತನ ಫೋಟೋವನ್ನೂ ಬಿಡುಗಡೆ ಮಾಡಿದೆ.
ಶೂಟರ್ ಅನ್ನು ೨೦ ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ.
ಈ ಘಟನೆ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡ ಅಮೆರಿಕದ ಗುಪ್ತಚರ ಇಲಾಖೆ ಕೆಲವು ಸಂಗತಿಗಳನ್ನು ಪತ್ತೆ ಮಾಡಿದೆ. ಕ್ರೂಕ್ಸ್ ವಿದ್ಯಾರ್ಥಿಯಾಗಿದ್ದ ಅತ್ಯಂತ ಸೌಮ್ಯ ಸ್ವಭಾವದ ಹುಡುಗನಾಗಿದ್ದ. ಯಾವಾಗಲೂ ಒಬ್ಬಂಟಿಯಾಗಿಯೇ ಇರುತ್ತಿದ್ದ. ಆತನ ಯಾವತ್ತೂ ಟ್ರಂಪ್ ಬಗ್ಗೆಯಾಗಲೀ ರಾಜಕೀಯದ ಬಗ್ಗೆಯಾಗಲೀ ಚರ್ಚಿಸಿದ್ದನ್ನೇ ನಾವು ನೋಡಿಲ್ಲ. ಶಾಲೆಯಲ್ಲಿ ಸದಾ ಆತನನ್ನು ಇತರೆ ವಿದ್ಯಾರ್ಥಿಗಳು ರೇಗಿಸುತ್ತಿದ್ದರು. ಆತನ ಧರಿಸುತ್ತಿದ್ದ ಬಟ್ಟೆಯ ಬಗ್ಗೆ ವಿದ್ಯಾರ್ಥಿಗಳು ತಮಾಶೆ ಮಾಡುತ್ತಿದ್ದರು. ಆದರೂ ಆತ ಸುಮ್ಮನೇ ಇರುತ್ತಿದ್ದ ಎಂದು ಆತನ ಸಹಪಾಠಿ ಮಾಹಿತಿ ನೀಡಿದ್ದಾರೆ.
ಕ್ರೂಕ್ಸ್ ಅನುಕೂಲಸ್ಥ ಕುಟಂಬಸ್ಥದಲ್ಲಿ ಬೆಳೆದವನು. ಅವರು ಒಂದು ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ. ಈತ ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್ನಿಂದ ಬಟ್ಲರ್ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಇನ್ನು ಕ್ರೂಕ್ಸ್ ನ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದ್ದು, ಇದು ಮೇಲ್ನೋಟಕ್ಕೆ ಸ್ಫೋಟಕ ವಸ್ತುವಿನಂತೆ ಕಾಣುತ್ತಿತ್ತು. ಈ ವಸ್ತುವನ್ನು ಬಾಂಬ್ ನಿಷ್ಕ್ರೀಯ ದಳ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಕ್ರೂಕ್ಸ್ ನ ಮೋಬೈಲ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇನ್ನು ಟ್ರಂಪ್ ಮೇಲಿನ ದಾಳಿಗೆ ಕ್ರೂಕ್ಸ್ ಬಳಸಿದ್ದ ಬಂದೂಕು ಎಆರ್ ಸೆಮಿ ಅಟೋಮ್ಯಾಟಿಕ್ ಬಂದೂಕ್ ಆಗಿದ್ದು, ಇದನ್ನು ಕ್ರೂಕ್ಸ್ ನ ತಂದೆ ಕಾನೂನು ಪ್ರಕಾರ ಖರೀದಿ ಮಾಡಿದ್ದರು ಎನ್ನಲಾಗಿದೆ.
ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಟ್ರಂಪ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ಸದ್ದಿಗೆ ಟ್ರಂಪ್ ವೇದಿಕೆಯ ಮೇಲೆ ಬಿದ್ದಿದ್ದಾರೆ. ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್ಗಳು ಟ್ರಂಪ್ ಅವರನ್ನು ರಕ್ಷಿಸಿ ವೇದಿಕೆಯಿಂದ ತಕ್ಷಣವೇ ವೇದಿಕೆಯಿಂದ ಸ್ಥಳದಿಂದ ಹೊರಗಡೆ ಕರೆದೊಯ್ದಿದ್ದರು. ಈ ದಾಳಿಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಾಯವಾಗಿತ್ತು.