ಬ್ರೆಜಿಲ್, ಆ 10(DaijiworldNews/MS): ಬ್ರೆಜಿಲ್ನಲ್ಲಿ ವಿಮಾನವೊಂದು ಪತನಗೊಂಡು ವಿಮಾನದಲ್ಲಿದ್ದ ೬೨ ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನ ಸಾವೊ ಪಾಲೊ ರಾಜ್ಯದ ವಿನ್ಹೆಡೊ ನಗರದಲ್ಲಿ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನ ಶುಕ್ರವಾರ ಅಪಘಾತಕ್ಕೀಡಾಗಿದೆ. ಬ್ರೆಜಿಲ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ದುರಂತದ ಭೀಕರತೆಯನ್ನು ಎತ್ತಿ ತೋರಿಸಿವೆ.
ವೋಪಾಸ್ ಲಿನ್ಹಾಸ್ ಏರಿಯಾಸ್ ನಿರ್ವಹಿಸುತ್ತಿದ್ದ ATR-72 ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್ಗೆ ಹೋಗುತ್ತಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ G1 ವರದಿ ಮಾಡಿದೆ. ಬ್ರೆಜಿಲಿಯನ್ ವಿಮಾನವು ಸಾವೊ ಪಾಲೊದಿಂದ ವಾಯುವ್ಯಕ್ಕೆ 80 ಕಿಲೋಮೀಟರ್ ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ.
ದಟ್ಟ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡ ಕ್ಷಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಟ್ಟ ಹೊಗೆ ಆವರಿಸಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬ್ರೆಜಿಲ್ ವಿಮಾನ ಅಪಘಾತದಲ್ಲಿ ಪ್ರಯಾಣ ನಡೆಸುತ್ತಿದ್ದವರು ಯಾರು ಬದುಕುಳಿದಿಲ್ಲ, ವಿಮಾನ ಪತನದಿಂದ ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್ನಲ್ಲಿರುವ ಮನೆಯೊಂದು ಪತನದೊಂಡಿದ್ದು, ಆದರೆ ಯಾವುದೇ ನಿವಾಸಿಗಳು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Voepass ಏರ್ಲೈನ್ಸ್ ಬ್ರೆಜಿಲ್ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.