ಡಾಕಾ,ಆ.12 (DaijiworldNews/AK): ಬಾಂಗ್ಲಾದೇಶಕ್ಕೆ ಸೇರಿದ ಸೆಂಟ್ ಮಾರ್ಟಿನ್ ದ್ವೀ ಪವನ್ನು ಅಮೆರಿಕಕ್ಕೆ ಒಪ್ಪಿಸಿದ್ದಿದ್ದರೆ ಸರಕಾರ ಬೀಳುತ್ತಿರಲಿಲ್ಲ ಎಂದು ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿಕೊಂಡಿದ್ದಾರೆ.
ಅಲ್ಲದೇ ತಮ್ಮ ಸರಕಾರದ ಪತನದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.ದೇಶ ತೊರೆಯುವುದಕ್ಕೂ ಮುನ್ನ ರಾಷ್ಟ್ರವನ್ನುದ್ದೇಶಿಸಿ ಅವರು ಭಾಷಣ ಮಾಡಲು ಮುಂದಾಗಿದ್ದರೂ, ಸೇನೆ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆ ಭಾಷಣ ಪ್ರತಿ ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಅಮೆರಿಕದ ವಿದ್ಯಾರ್ಥಿ ಗಳ ಶವಗಳ ಮೇಲೆ ಅಧಿಕಾರ ಸ್ಥಾಪಿಸಲು ಅವರು ಯೋಜಿಸಿದ್ದರು. ಬಂಗಾಲಕೊಲ್ಲಿಯ ಈಶಾನ್ಯ ಭಾಗದಲ್ಲಿರುವ ಸೆ.ಮಾರ್ಟಿನ್ ದ್ವೀ ಪದಲ್ಲಿ ಅಮೆರಿಕ ತನ್ನ ವಾಯುನೆಲೆಯನ್ನು ಸ್ಥಾಪಿಸಲು ಉದ್ದೇಶಿ ಸಿತ್ತು. ನಾನು ಎಂದಿಗೂ ಪ್ರತಿಭಟನಕಾರರನ್ನು ರಜಾಕಾರರು ಎಂದು ಕರೆದಿಲ್ಲ. ನನ್ನ ಮಾತುಗಳನ್ನು ತಿರುಚಲಾಗಿದೆ.ಅಂದಿನ ಭಾಷಣದ ಪೂರ್ಣ ವೀಡಿಯೋ ಪರಿಶೀಲಿಸಿ ಎಂದಿದ್ದಾರೆ.