ಕೊಲಂಬೊ, ಆ.14(DaijiworldNews/AK): ಶ್ರೀಲಂಕಾದಲ್ಲಿ ಸೆಪ್ಟೆಂಬರ್ 21ರಂ ದು ನಡೆಯಲಿರುವ ಅಧ್ಯಕ್ಷೀ ಯ ಚುನಾವಣೆಗೆ ಮೂವರು ತಮಿಳರು ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿದಂತೆ ಒಟ್ಟು 39 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
39 ಮಂದಿ ಅಧ್ಯಕ್ಷೀ ಯ ಆಕಾಂಕ್ಷಿಗಳ ಪೈಕಿ ಒಬ್ಬರು ಕೂಡ ಮಹಿಳಾ ಅಭ್ಯರ್ಥಿ ಇಲ್ಲ. 2019ರ ಕೊನೆಯ ಅಧ್ಯಕ್ಷೀ ಯ ಚುನಾವಣೆಯಲ್ಲಿ 35 ಅಭ್ಯರ್ಥಿ ಗಳು ಸ್ಪರ್ಧಿಸಿದ್ದರು. 1982ರ ಅಕ್ಟೋ ಬರ್ನಲ್ಲಿ ನಡೆದ ಮೊದಲ ಅಧ್ಯಕ್ಷೀ ಯ ಚುನಾವಣೆಯಲ್ಲಿ ಕೇವಲ 6 ಅಭ್ಯರ್ಥಿ ಗಳು ಕಣದಲಿದ್ದರು.
ನಾಮ ಪತ್ರ ಸಲ್ಲಿಸಲು ಇಂದು ಕೊನೆಯ ದಿನ. ದಾಖಲೆಯ 39 ಅಭ್ಯರ್ಥಿ ಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.ಅವರಲ್ಲಿ ಒಬ್ಬರು ನಾಮಪತ್ರ ಸಲ್ಲಿಸದಿರಲು ನಿರ್ಧರಿಸಿದ್ದಾರೆ.ಮೂರು ಅಭ್ಯರ್ಥಿ ಗಳ ವಿರುದ್ಧ ಮೂರು ಆಕ್ಷೇಪಣೆಗಳಿದ್ದು, ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.