ಹೊಸದಿಲ್ಲಿ, ನ 27: ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಈಗಿರುವಷ್ಟು ದುರ್ಬಲ ಪ್ರಧಾನಿಯನ್ನು ನೋಡಿಯೇ ಇರಲಿಲ್ಲ, ಎಂದು ಮಾಜಿ ಕೇಂದ್ರ ಸಚಿವ, ಪತ್ರಕರ್ತ ಅರುಣ್ ಶೌರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಟೈಮ್ಸ್ ಸಾಹಿತ್ಯೋತ್ಸವದಲ್ಲಿ ಎ ಫ್ಯೂ ಲೆಸನ್ಸ್ ಫಾರ್ ಫಾಲೋಯರ್ಸ್ ಎಂಬ ವಿಷಯದ ಮೇಲೆ ಮಾತನಾಡಿದ ಶೌರಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸುಳ್ಳನ್ನು ಹೆಚ್ಚು ವೈಭವೀಕರಿಸಲಾಗುತ್ತಿದೆ. ಇದರಿಂದ ಸತ್ಯವೇ ಮರೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವುದಾದರೂ ಒಂದು ವಿಷಯವನ್ನು ವಿರೋಧಿಸಬೇಕಾದರೆ ಅದರ ಬಗ್ಗೆ ಆಳ ಜ್ಞಾನವಿರಬೇಕು. ಆದರೆ ಯಾವುದೇ ಜ್ಞಾನವಿಲ್ಲದೇ ವಿಷಯಗಳ ಬಗ್ಗೆ ವಾದಿಸುತ್ತಾರೆ. ಯಾವ ಗುಂಪಿಗೆ ಬೇಕಾದರೂ ಇಂದು ಬೆಂಕಿ ಹಚ್ಚಬಹುದು. ದೃಷ್ಕ್ಯತ್ಯಗಳು ದೊಡ್ಡ ಗುಂಪಿನಿಂದಲೇ ಆಗಬೇಕೆಂದು ಇಲ್ಲ. ಕೆಲ ಸಣ್ಣ ಗುಂಪು ಇಂಥ ಕಾರ್ಯವೆಸಗಿ, ಕಿಚ್ಚನ್ನು ಹಬ್ಬಿಸುತ್ತವೆ. ಈ ಬಗ್ಗೆ ನಮಗೆ ಅರಿವು ಕಮ್ಮಿಯಾದಲ್ಲಿ, ನಾವೂ ಇಂಥ ಕೃತ್ಯಗಳಲ್ಲಿ ಭಾಗಿಯಾಗಬೇಕಾಗುತ್ತದೆ ಎಂದು ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.