ಮಂಗಳೂರು, ಮೇ24(Daijiworld News/SS): ಪ್ರಾಮಾಣಿಕತೆ, ನೀತಿವಂತಿಕೆಯಿಂದ ಬದುಕುವವರ ಸಂಖ್ಯೆ ಬಹಳ ಕಡಿಮೆ ಆಗ್ತಿದೆ ಎಂಬುದು ಇತ್ತೀಚೆಗೆ ಪದೇಪದೇ ಕೇಳಿಬರುತ್ತಿರುವ ಮಾತು. ಅದರಲ್ಲೂ ಬೇರೆಯವರ ಆಸ್ತಿ, ಹಣ ಸಿಕ್ಕಿದರೆ ಒಳಗೆ ಹಾಕಿಕೊಳ್ಳೋಣ ಅಂತ ಯೋಚಿಸುವವರ ಸಂಖ್ಯೆಯೇ ಹೆಚ್ಚು. ಆದರೆ ಇಲ್ಲೊಬ್ಬ ಮಂಗಳೂರಿನ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದ್ದಾರೆ.
ಸುಮಾರು 78000/- ರೂ ಮೌಲ್ಯದ ಸ್ಯಾಂ ಸಂಗ್ ಮೊಬೈಲು ಒಂದನ್ನು ಬಾಶಿಲ್ ಎಂಬ ಪಾಂಡೇಶ್ವರದ ನಿವಾಸಿಯೊಬ್ಬರು ಅಟೋದಲ್ಲಿ ಕಳೆದುಕೊಂಡಿದ್ದರು. ಆದರೆ ಮಂಗಳೂರಿನ ಆಟೋ ಚಾಲಕ ಶ್ರೀ ಅರುಣ ಅವರು ತಮ್ಮ ಆಟೋದಲ್ಲಿ ಸಿಕ್ಕ ಈ ಬೆಲೆಬಾಳುವ ಮೊಬೈಲ್ ಫೋನ್ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಹಣಕ್ಕಾಗಿ ಹಾಡ ಹಗಲೇ ಕೊಲೆ, ಸುಲಿಗೆ ಮಾಡುವ ದಿನಮಾನದಲ್ಲಿ ಈ ಆಟೋಚಾಲಕ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. 'ಪರರ ಸೊತ್ತು ಪಾಷಾಣಕ್ಕೆ ಸಮ' ಎಂಬ ಗಾದೆ ಮಾತಿನಂತೆ ತಮಗೆ ಸಿಕ್ಕಿದ ಮೊಬೈಲ್ ಫೋನ್ ಅನ್ನು ನಿಷ್ಠಾವಂತರಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಪೊಲೀಸ್ ನಿರೀಕ್ಷಕರು ಮುಕ್ತ ಕಂಠದಿಂದ ಆಟೋ ಚಾಲಕನನ್ನು ಶ್ಲಾಘಿಸಿದ್ದಾರೆ.