ಮಂಗಳೂರು, ಆಗಸ್ಟ್ 16, (DaijiworldNews/AK) :ದಾಯ್ಜಿವರ್ಲ್ಡ್ ವಾಹಿನಿ ಪ್ರಸ್ತುತಿಯಲ್ಲಿ ಯಶೋಧೆ ಕೃಷ್ಣ - 2024 ಸ್ಪರ್ಧೆ ನಡೆಯಲಿದೆ. ನೃತ್ಯ ಮತ್ತು ಅಭಿನಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಕೃಷ್ಣ ಹಾಗೂ ಯಶೋಧೆಗೆ ವೇಷ ಧರಿಸುವುದು ಖಡ್ಡಾಯವಾಗಿದೆ. ಪ್ರಥಮ ವಿಜೇತ ತಂಡಕ್ಕೆ ನಗದು ಹಾಗೂ 5 ತಂಡಕ್ಕೆ ಆಕರ್ಷಕ ಬಹುಮಾನ, ಫಲಕ, ಪ್ರಶಸ್ತಿ ಪತ್ರ ಇರಲಿದೆ. ವೀಡಿಯೋ ಕಳುಹಿಸಲು ಆಗಸ್ಟ್ 22 ಕೊನೆಯ ದಿನಾಂಕವಾಗಿದ್ದು, ಆ ಬಳಿಕ ಬಂದ ವೀಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.

ಯಶೋಧೆ ಕೃಷ್ಣ ಸ್ಪರ್ಧೆಯ ನಿಯಾಮಾವಳಿಗಳು ಇಂತಿವೆ :
* ನೃತ್ಯ ಮತ್ತು ಅಭಿನಯಕ್ಕೆ ಅವಕಾಶ
* ಕೃಷ್ಣ ಹಾಗೂ ಯಶೋಧೆ ವೇಷ ಧರಿಸುವುದು ಕಡ್ಡಾಯ
* ವೀಡಿಯೋ ಉತ್ತಮ ಗುಣಮಟ್ಟ ಹೊಂದಿರಬೇಕು. ಅಡ್ಡ ವೀಡಿಯೋ ಮಾತ್ರ ಪರಿಗಣಿಸಲಾಗುವುದು.
* ಕೃಷ್ಣ ವೇಷ 10 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ.. ಯಶೋಧೆ ವೇಷಧಾರಿಗೆ ವಯಸ್ಸಿನ ಮಿತಿ ಇರುವುದಿಲ್ಲ.
* ಯಶೋಧೆ ಕೃಷ್ಣ ಇಬ್ಬರಿಗೆ ಮಾತ್ರ ಅವಕಾಶ, ಹೆಚ್ಚು ಮಂದಿ ತಂಡದಲ್ಲಿದ್ದಲ್ಲಿ ಆ ವೀಡಿಯೋವನ್ನು ಪರಿಗಣಿಸಲಾಗುವುದಿಲ್ಲ
* ಕೃಷ್ಣ ವೇಷಧಾರಿ ಮಕ್ಕಳ ಜನನ ಪತ್ರವನ್ನು ವೀಡಿಯೋ ಕಳುಹಿಸುವಾಗಲೇ ಕಳುಹಿಸುವುದು ಕಡ್ಡಾಯ
* ವೀಡಿಯೋ ಕಳುಹಿಸಲು ಕೊನೆಯ ದಿನಾಂಕ : 22 ಆಗಸ್ಟ್ 2024
* ಅಪಹಾಸ್ಯ, ಅಶ್ಲೀಲತೆಗೆ ಯಾವುದೇ ಅವಕಾಶವಿರುವುದಿಲ್ಲ
* ತೀರ್ಪುಗಾರರ ತೀರ್ಮಾನವೇ ಅಂತಿಮ
* ಪ್ರಥಮ ವಿಜೇತ ತಂಡಕ್ಕೆ 10,000 ನಗದು ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ 05 ತಂಡಕ್ಕೆ ಆಕರ್ಷಕ ಬಹುಮಾನ, ಫಲಕ, ಪ್ರಶಸ್ತಿ ಪತ್ರ
* ವೀಡಿಯೋ ಕಳುಹಿಸಬೇಕಾದ ಸಂಖ್ಯೆ : 7022604570