ಕಾಸರಗೋಡು, ಆ.16(DaijiworldNews/AA): ಮನೆಗೆ ನುಗ್ಗಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೂಡಂಬೈಲು ಬೆಜ್ಜದ ನಿಸಾರ್ (26) ಬಂಧಿತ.
ಜುಲೈ ೨ರಂದು ಬೇರಿಕೆಯ ಅಬೂಬಕ್ಕರ್ ಸಿದ್ದೀಕ್ ರವರ ಮನೆಗೆ ನುಗ್ಗಿದ ತಂಡವು ತಲವಾರು ಬೀಸಿ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ನಿಸಾರ್ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ಮೊರೆತ್ತಣೆ ಕಜೆ ಕೋಡಿಯ ಅಸ್ಗರ್, ಮೊರತ್ತಣೆ ಬಟ್ಯಪದವಿನ ಮುಹಮ್ಮದ್ ಹುಸೈನ್ ಆರೋಪಿಗಳಾಗಿದ್ದಾರೆ.
ನಿಸಾರ್ ಕರ್ನಾಟಕಕ್ಕೆ ಪರಾರಿಯಾಗಿ ತಲೆ ಮರೆಸಿ ಕೊಂಡಿದ್ದನು. ಈತ ಊರಿಗೆ ತಲುಪಿದ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.