ಮಂಗಳೂರು, ಆ.17(DaijiworldNews/AA): ಸ್ಕೂಟಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಉಳ್ಳಾಲ ಎಎಸ್ಐ ಪತ್ನಿ, ಶಿಕ್ಷಕಿ ಶಾಹಿದಾ (47) ಮೃತಪಟ್ಟ ಘಟನೆ ನಗರದ ಮೀನುಗಾರಿಕಾ ಬಂದರಿನಲ್ಲಿ ಶುಕ್ರವಾರ ನಡೆದಿದೆ.

ಶುಕ್ರವಾರ ಬೆಳಗ್ಗೆ ಶಾಹಿದಾ ತನ್ನ ಸ್ಕೂಟಿಯಲ್ಲಿ ಶಾಲೆಯ ಕಡೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಗೆ ಕಾರೊಂದು ಢಿಕ್ಕಿ ಹೊಡೆದಿದ್ದು, ತಕ್ಷಣ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಹಿದಾ ಅವರು ಸೋಮೇಶ್ವರ ಪಿಲಾರು ದಾರಂದಬಾಗಿಲು ನಿವಾಸಿ. ಅವರು ಉಳ್ಳಾಲ ಪೊಲೀಸ್ ಠಾಣೆಯ ಎಎಸ್ಐ ಮೊಹಮ್ಮದ್ ಅವರ ಪತ್ನಿಯಾಗಿದ್ದಾರೆ. ಶಾಹಿದಾ ಅವರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.