ಉಡುಪಿ, ಆ.18(DaijiworldNews/AA): ಶ್ರೀ ಕೃಷ್ಣನ ನಾಡು ಉಡುಪಿಯು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಜ್ಜಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಪುಟ್ಟ ಮಕ್ಕಳು ಶ್ರೀಕೃಷ್ಣನ ವೇಷವನ್ನು ಧರಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಾಯ್ಜಿವರ್ಲ್ಡ್ ಉಡುಪಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು "ಚೆಲ್ವ ಕೃಷ್ಣ" ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯು 0-2 ವರ್ಷ ಮತ್ತು 2-5 ವರ್ಷ ವಯೋಮಾನದ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಿಜೇತರಿಗೆ ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಟ್ರೋಫಿ, ಪ್ರಮಾಣಪತ್ರ, ಮೂರು ಸಮಾಧಾನಕರ ಬಹುಮಾನಗಳನ್ನು ಕೂಡ ನೀಡಲಾಗುವುದು.
ನಿಯಮಗಳು ಮತ್ತು ಷರತ್ತುಗಳು:
* 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
* 0 ರಿಂದ 2 ವರ್ಷದ ವಿಭಾಗದಲ್ಲಿ, 2024ರ ಆಗಸ್ಟ್ 29 ರೊಳಗೆ ಮಗುವಿನ ವಯಸ್ಸು 2 ವರ್ಷ ಮೀರಬಾರದು.
* 2 ರಿಂದ 5 ವರ್ಷದ ವಿಭಾಗದಲ್ಲಿ, 2024ರ ಆಗಸ್ಟ್ 29 ರೊಳಗೆ ಮಗುವಿನ ವಯಸ್ಸು 5 ವರ್ಷ ಮೀರಬಾರದು.
* ಎಡಿಟ್ ಮಾಡಿದ ಮತ್ತು ವಾಟರ್ಮಾರ್ಕ್ ಬಳಸಿದ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
* ಛಾಯಾಚಿತ್ರಗಳು ಸ್ವಾಭಾವಿಕವಾಗಿದ್ದು, ಇತ್ತೀಚೆಗೆ ತೆಗೆದ ಛಾಯಾಚಿತ್ರವಾಗಿರಬೇಕು.
* ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರಬೇಕು.
* ಭಾಗವಹಿಸುವವರು ಕೃಷ್ಣ ವೇಷದ 3 ಭಂಗಿಗಳ 3 ವಿಭಿನ್ನ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬೇಕು.
* ಮಗುವಿನ ಜನನ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು.
* ಭಾವಚಿತ್ರಗಳೊಂದಿಗೆ ಅಭ್ಯರ್ಥಿಯ ಹೆಸರು, ಪೋಷಕರ ಹೆಸರು, ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಬೇಕು.
* ತೀರ್ಪುಗಾರರ ತೀರ್ಮಾನವೇ ಅಂತಿಮ.
* ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ: ಆಗಸ್ಟ್ 29, 2024
* ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
ನಿಮ್ಮ ಮಗುವಿನ ಮುದ್ದಾದ ಕೃಷ್ಣ ವೇಷದಲ್ಲಿರುವ ಛಾಯಾಚಿತ್ರಗಳನ್ನು ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು: contestdwudupi@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 73386 37690 / +91 73386 37682