ಕಾಪು, ಆ.18(DaijiworldNews/AA): ರಸ್ತೆ ಬದಿಯ ಚರಂಡಿಗೆ ಸ್ಕೂಟಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬೆಳಪು ಪುಂಚಲಕಾಡು ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತರನ್ನು ಅದಮಾರು ಬಂಡಸಾಲೆ ನಿವಾಸಿ ಜಗದೀಶ ಮೂಲ್ಯ (33) ಎಂದು ಗುರುತಿಸಲಾಗಿದೆ.
ಜಗದೀಶ್ ವಾರದ ಹಿಂದೆ ವಿದೇಶದಿಂದ ಸ್ವಗ್ರಾಮಕ್ಕೆ ಬಂದಿದ್ದರು. ಅವರು ಪುಂಚಲಕಾಡು ಕಡೆಯಿಂದ ಬೆಳಪು ರಸ್ತೆ ಮೂಲಕ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಜಗದೀಶ ಅವರು ಚಲಾಯಿಸುತ್ತಿದ್ದ ಸ್ಕೂಟಿ ರಸ್ತೆ ಬದಿಯ ಚರಂಡಿಯ ಗೋಡೆಗೆ ಢಿಕ್ಕಿ ಹೊಡೆದಿದ್ದರಿಂದ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಗದೀಶ್ ಅವರು ಅದಮಾರು ಬಂಡಸಾಲೆ ನಿವಾಸಿಗಳಾದ ಅಶೋಕ್ ಮೂಲ್ಯ ಮತ್ತು ಶಾರದ ಮೂಲ್ಯ ದಂಪತಿಯ ಹಿರಿಯ ಪುತ್ರರಾಗಿದ್ದಾರೆ. ಅವರು ಪೋಷಕರು ಮತ್ತು ಪತ್ನಿಯನ್ನು ಅಗಲಿದ್ದಾರೆ.