ಮಂಗಳೂರು, ನ 27: ಸಂವಿಧಾನದ ದಿನದ ಜಾಹೀರಾತಿನಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಚಿತ್ರವನ್ನು ಸೇರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಶೋಭಾ ಕರಂದ್ಲಾಜೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ ಖಾದರ್ ಹೇಳಿದರು. ನಗರದ ಸಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಉತ್ತಮ ಆಡಳಿತವನ್ನು ನೀಡಿದೆ ಹಾಗೂ ಜನಸ್ನೇಹಿ ಯೋಜನೆ ನೀಡಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಲು ಬೇರೆ ಕಾರಣಗಳಿಲ್ಲದೆ ಇಲ್ಲ ಸಲ್ಲದ ಕಾರಣ ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು. ವಿಪಕ್ಷ ವಾದ ಬಿಜೆಪಿಯವರು ಕೆ. ಜೆ ಜಾರ್ಜ್ ಮತ್ತು ವಿನಯ್ ಕುಲಕರ್ಣಿ ಅವರ ರಾಜೀನಾಮೆ ಕೇಳುವ ನೆಪದಲ್ಲಿ ಬೆಳಗಾವಿ ಅಧಿವೇಶಕ್ಕೆ ಅಡ್ದಿ ಪಡಿಸಿದ್ದಾರೆ. ಈ ರೀತಿ ಗೊಂದಲಗಳನ್ನು ಸೃಷ್ಟಿಸುವ ಬದಲು ಬಿಜೆಪಿ ಜನಪರ ಕೆಲಸ ಮಾಡಲಿ ಸಲಹೆ ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರ ಜಿಎಸ್ ಟಿ ಯಡಿ ಕೆಲವೊಂದು ವಸ್ತುಗಳ ದರ ಕಡಿತಗೊಳಿಸಿದ್ದು, ಮಾರಾಟಗಾರರು ನಿಗದಿ ಪಡಿಸಿದ ದರ ನಮೂದಿಸಿಯೇ ಮಾರಾಟ ಮಾಡಬೇಕು ಈ ನಿರ್ಲಕ್ಷ್ಯ ವಹಿಸಿದ್ರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಖಾದರ್ ಎಚ್ಚರಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ತಾ.ಪ ಅಧ್ಯಕ್ಶ ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಮೆಲ್ವಿನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.