ಪಡುಬಿದ್ರಿ ನ : ಲಾಕೌಟ್ ಘೋಷಣಾ ಮಾಡಿ ಬೀಗ ಹಾಕಿರುವ ಸುಜ್ಲಾನ್ ಕಂಪನಿಯ ಅಧಿಕಾರಿಗಳು ಮಾತುಕತೆಗಾಗಿ ಪಡುಬಿದ್ರಿಗೆ ನ 27 ರಂದು ಆಗಮಿಸಿದ್ದಾರೆ. ನ 28 ರ ಮಂಗಳವಾರ ಕಾರ್ಮಿಕ ನಾಯಕರು ಹಾಗೂ ಸುಜ್ಲಾನ್ ಕಂಪನಿಯ ಅಧಿಕಾರಿಗಳ ನಡುವೆ ನಡೆಯಲಿರುವ ಮಾತುಕತೆಗಾಗಿ ಪುಣೆಯ ಕಾರ್ಪೊರೇಟ್ ಕಂಪನಿ ಕಚೇರಿಯಿಂದ ಅಧಿಕಾರಿಗಳ ದಂಡೇ ಪಡುಬಿದ್ರಿಯಲ್ಲಿ ಬೀಡುಬಿಟ್ಟಿದೆ. ಹೀಗಾಗಿ ಇಂದು ಸುಜ್ಲಾನ್ ಗಾಳಿಯಂತ್ರ ಕಂಪನಿಯ ಅಧ್ಯಕ್ಷ ತಂತಿ ಸೇರಿದಂತೆ ಕಾರ್ಪೊರೇಟ್ ಪ್ರಮುಖ ವಿಜಯ್ ಅಸ್ನಾನಿ ಸಹಿತ ಹಲವು ಅಧಿಕಾರಿಗಳು ಮಾತುಕತೆಯಲ್ಲಿ ಉಪಸ್ಥಿತರಿರುವ ಸಾಧ್ಯತೆ ಇದೆ. ಇನ್ನು ಸುಜ್ಲಾನ್ ಕಿತ್ತೊಗೆದಿದ್ದ ಸುಮಾರು 326 ಕಾರ್ಮಿಕರ ಭವಿಷ್ಯ ಈ ಮಾತುಕತೆಯಲ್ಲಿ ಅಡಗಿದೆ ಎನ್ನಲಾಗಿದೆ.