ಬೆಳ್ತಂಗಡಿ,ಮೇ 27(Daijiworld News/MSP): ವಿದ್ಯಾರ್ಥಿಗಳ ತಂಡಗಳ ಮಧ್ಯೆ ನಡೆದ ಪರಸ್ಪರ ಘರ್ಷಣೆಯ ಪರಿಣಾಮ ಪೋಲಿಸರು ಬೆಳ್ತಂಗಡಿ ಪಟ್ಟಣದಲ್ಲಿ ಲಾಠಿ ಚಾರ್ಜ್ ನಡೆಸಿ 11 ವಿದ್ಯಾರ್ಥಿಗಳನ್ನು ಮೇ 26 ರಂದು ಬಂಧಿಸಿ ಆ ಬಳಿಕ ಠಾಣೆಯಿಂದಲೇ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.
ಮಹಮ್ಮದ್ ನೌಫಲ್ , ನಜೀರ್, ಮಹಮ್ಮದ್ ಮುಸ್ತಫಾ, ಜಾಯಿದ್ ಅಲಿ , ಮಹಮ್ಮದ್ ಸೈಫಲ್ , ಉಸ್ಮಾನ್ , ಸಫಾನ್, ಇಮ್ರಾನ್, ಆಸಿಫ್, ಮಹಮ್ಮದ್ ಯಾಸಿನ್ , ಅಜಂ ವಿರುದ್ದ ಪ್ರಕರಣ ದಾಖಲಾಗಿದೆ.
ಮೊಬೈಲ್ ಸಂದೇಶದ ವಿಚಾರವಾಗಿ ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರ ಮಧ್ಯೆ ಕಲಹವಾಗಿತ್ತು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಪರಸ್ಪರ ರಾಜಿ ಮಾಡಿಕೊಂಡು ಪ್ರಕರಣ ದಾಖಲಿಸದಂತೆ ಪೊಲೀಸರಲ್ಲಿ ಮನವಿ ಮಾಡಿ ತೆರಳಿದ್ದರು.
ಆ ಬಳಿಕ ಸಂಜೆ ಇದೆ ವಿಚಾರಕ್ಕೆ ಸಿಎಫ್ಐ ಹಾಗೂ ಪಿಎಫ್ಐ ವಿದ್ಯಾರ್ಥಿ ಸಂಘಟನೆಯ 15 ಮಂದಿ ಯುವಕರು ಪೊಲೀಸ್ ಅನುಮತಿ ಪಡೆಯದೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ತಡೆಯೊಡ್ಡಿದಾಗ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ