ಮಂಗಳೂರು, ಸೆ.6(DaijiworldNews/AA): ಬೈಕೊಂದು ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಮಂಗಳೂರಿನ ಯೆಯ್ಯಾಡಿ ಬಳಿ ಸಂಭವಿಸಿದೆ.

ಮೃತರನ್ನು ರಾಮಕುಂಜದ ಚೇತನ್ ಹಾಗೂ ಉರ್ವಾಸ್ಟೋರ್ ನ ಕಾಶಿ ಎಂದು ಗುರುತಿಸಲಾಗಿದೆ.
ಸವಾರರು ಇಂದು ಮುಂಜಾನೆ 3ರ ಸುಮಾರಿಗೆ ಶಕ್ತಿನಗರದಿಂದ ಬರುತ್ತಿದ್ದ ವೇಳೆಗೆ ಮಳೆಯ ಕಾರಣದಿಂದ ಬೈಕ್ ಸ್ಕಿಡ್ ಆಗಿತ್ತು ಎನ್ನಲಾಗಿದೆ. ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.