ಮಂಗಳೂರು, ಸೆ.6(DaijiworldNews/AA): ಮಂಗಳ ಸಮೂಹ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಗಳಾದ ನ್ಯೂ ಮಂಗಳ ಕಾಲೇಜ್ ಆಫ್ ನರ್ಸಿಂಗ್, ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್, ಮಂಗಳ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸ್ಸ್, ಮಂಗಳ ಸ್ಕೂಲ್ ಆಫ್ ನರ್ಸಿಂಗ್, ಮಂಗಳ ಕಾಲೇಜ್ ಆಫ್ ಫಿಸಿಯೊತೆರಪಿ ಕಾಲೇಜುಗಳ ಪದವಿ ಪ್ರಧಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಗುರುವಾರ ಅದ್ದೂರಿಯಾಗಿ ಜರುಗಿತು.




ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಡಾ. ಜಿ. ಅರುಣ್ ಮಯ್ಯ, ಪ್ರೋಫೆಸರ್ ಮತ್ತು ಡೀನ್ (ಫಿಸಿಯೋತೆರಪಿ) ಎಂ.ಸಿ.ಎಚ್.ಪಿ. ಮಾಹೆ, ಮಣಿಪಾಲ್, ದೀಪ ಬೆಳಗಿಸಿ ಮಾತನಾಡಿದ ಇವರು ನೂತನ ಪದವಿದರರನ್ನು ಉದ್ದೇಶಿಸಿ ವೃತ್ತಿ ಜೀವನದಲ್ಲಿ ಒಳ್ಳೆಯ ಉದ್ದೇಶ(ನಿಲುವು), ಕೌಶಲ್ಯವನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ ಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ವೃತ್ತಿ ಜೀವನದಲ್ಲಿ ತಾಳ್ಮೆ, ಪರಿಶ್ರಮ, ಕಾರ್ಯಕ್ಷಮತೆಯನ್ನು ಅಳವಡಿಸಿಕೊಂಡರೆ ವೈಯುಕ್ತಿಕ ಮತ್ತು ಆರೋಗ್ಯ ಕ್ಷೇತದಲ್ಲಿ ಯಶಸ್ಸನ್ನು ಗಳಿಸುವುದರ ಮೂಲಕ ಹೊರ ಜಗತ್ತಿನಲ್ಲಿ ತಮ್ಮ ಇರುವಿಕೆಯನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿ ನೂತನ ಪದವೀದರರಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮೂಹ ಸಂಸ್ಥೆಗಳ 328 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ, ಚಿನ್ನದ ಪದಕ ಪಡೆದ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್ ನ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 5 ಅಕಾಡೆಮಿಕ್ ಟಾಪರ್, 7 ರ್ಯಾಂಕ್ ಪಡೆದ ವಿದ್ಯಾರ್ಥಿ ಮತ್ತು 5 ಬೆಸ್ಟ್ ಔಟ್ ಗೋಯಿಂಗ್ ವಿದ್ಯಾರ್ಥಿಗಳನ್ನು ಕೂಡ ಗೌರವಿಸಲಾಯಿತು.
ನ್ಯೂ ಮಂಗಳ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಮಂಗಳ ಸ್ಕೂಲ್ ಆಫ್ ನರ್ಸಿಂಗ್ನ ಪ್ರಾಶುಪಾಲರಾದ ಪ್ರೊ. ಸುಬ್ರಮಣ್ಯ ನಾಯಕ್ ಮತ್ತು ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಮಂಗಳ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸ್ಸ್ ನ ಪ್ರಾಂಶುಪಾಲೆಯಾದ ಪ್ರೊ. ಪ್ರತಿಜ್ಞಾ ಸುಹಾಸಿನಿ ಜಿ ಆರ್ ಹಾಗೂ ಮಂಗಳ ಕಾಲೇಜ್ ಆಫ್ ಫಿಸಿಯೊತೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಭರತ್ ಕೆ. ಹೆಚ್. ರವರು ಕಾಲೇಜಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಈ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಅನಿತಾ ಜಿ ಭಟ್, ಸ್ಪೋಟ್ಸ್ ಮೆಡಿಸಿನ್ ತಜ್ಞರಾದ ಡಾ. ಪ್ರವೀಣ್ ರೈ ಯವರು
ಉಪಸ್ಥಿತರಿದ್ದರು.
ಶೈಕ್ಷಣಿಕ ಸಲಹೆಗಾರ ಹಾಗೂ ಮಂಗಳ ಕಿಡ್ನಿ ಪೌಂಢೇಶನ್ನ ಖ್ಯಾತ ಮೂತ್ರರೋಗ ತಜ್ಞ ಡಾ. ಮೊಯ್ದೀನ್ ನಫ್ಸೀರ್ರವರು ಸ್ವಾಗತಿಸಿ, ಅಲೈಡ್ ಹೆಲ್ತ್ಸೈನ್ಸ್ಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಗೀತಾಲಕ್ಷ್ಮಿಯವರು ಧನ್ಯವಾದ ಸಮರ್ಪಣೆ ಮಾಡಿದರು. ಫಿಸಿಯೋಲಜಿ ವಿಭಾಗದ ಅಧ್ಯಾಪಕರಾದ ಸಿಂಧೂರಿ ಎಸ್ ಶೆಟ್ಟಿ ಮತ್ತು ಫಿಸಿಯೊತೆರಪಿ ಅಧ್ಯಾಪಕರಾದ ಡಾ. ಶಿವಕೀರ್ತಿ ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ಅಪರಾಹ್ನ ಸಂಸ್ಥೆಯ ವಾರ್ಷಿಕೋತ್ಸವವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.