ಮಂಗಳೂರು, ಸೆ.7, (DaijiworldNews/TA):ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಜನಾಡಿಯ ಮಂಗಳಾಂತಿ ಮಸೀದಿ ಬಳಿ ಮಂಜೇಶ್ವರದ ಪೈವಳಿಕೆ ಕಲ್ಲೇಕರುಗುತ್ತು ನಿವಾಸಿ ಚಂದ್ರಹಾಸ್ ಶೆಟ್ಟಿ (67) ಸಾವನ್ನಪ್ಪಿದ ಘಟನೆ ಸೆ.5ರಂದು ಸಂಜೆ ನಡೆದಿದೆ.

ಪ್ರಗತಿಪರ ರೈತ ಚಂದ್ರಹಾಸ ಶೆಟ್ಟಿ ಅವರು ಹರೇಕಲ್ ದೆಬ್ಬೇಲಿಯಲ್ಲಿರುವ ತಮ್ಮ ಪತ್ನಿಯ ಮನೆಯಿಂದ ಕಲ್ಲೇಕರುಗುತ್ತು ಕಡೆಗೆ ಹೋಗುತ್ತಿದ್ದಾಗ ಅವರ ಸ್ಕೂಟರ್ಗೆ ಲಾರಿ ಡಿಕ್ಕಿ ಹೊಡೆದಿದೆ.
ಸಾಮಾಜಿಕ ಚಟುವಟಿಕೆಗಳು ಮತ್ತು ಧಾರ್ಮಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾದ ಶೆಟ್ಟಿ ಅವರು ಡಿಕ್ಕಿಯ ತೀವ್ರ ಪರಿಣಾಮದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೆಟ್ಟಿಪಾಡು ಕಡೆಯಿಂದ ನಾಟೇಕಲ್ ಕಡೆಗೆ ವೇಗವಾಗಿ ಬಂದ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ . ಘಟನೆ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.