ಕುಂದಾಪುರ, ಸೆ.7(DaijiworldNews/AA): ಟ್ಯಾಂಕರ್ನಿಂದ ತೈಲ ಸೋರಿಕೆ ಉಂಟಾಗಿ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ಬೈಕುಗಳು ಮತ್ತು ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.






ಗೌರಿ ಗಣೇಶ ಹಬ್ಬದ ದಿನ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ನಿಂದ ತೀವ್ರವಾದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕುಗಳು ಮತ್ತು ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಶುಕ್ರವಾರ ತಡರಾತ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆಕ್ಕಟ್ಟೆಯಿಂದ ಸಂಗಮ ವರೆಗೆ ಆಯಿಲ್ ಟ್ಯಾಂಕರ್ ನಿಂದ ಆಯಿಲ್ ಸೋರಿಕೆಯಾಗಿದೆ. ಆಯಿಲ್ ಸೋರಿಕೆಯಾದ ಪರಿಣಾಮ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಸಂಚರಿಸಿದ ವಾಹನಗಳ ಸವಾರರಿಗೆ ಆಯಿಲ್ ಬಿದ್ದಿರುವುದು ಗಮನಕ್ಕೆ ಬಾರದೆ ಅದರ ಮೇಲೆ ಚಲಿಸಿದ ಪರಿಣಾಮ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಮಾರು ಆರು ಏಳು ಜನ ಅಪಘಾತಕ್ಕೆ ಇದಾಗಿದ್ದು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಬಳಿಕ ಎಚ್ಚೆತ್ತುಕೊಂಡ ಸ್ಥಳೀಯರು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ದಳ ತೆಕ್ಕಟ್ಟೆಯಿಂದ ಕುಂದಾಪುರದ ಸಂಗಮ ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುವ ಹೆದ್ದಾರಿಯನ್ನು ಬಂದು ಮಾಡಿ ಆಯಿಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಆಯಿಲ್ ಚೆಲ್ಲಿರುವುದು ಆಯಿಲ್ ಟ್ಯಾಂಕರ್ ನ ಚಾಲಕನ ಗಮನಕ್ಕೂ ಬಂದಿಲ್ಲ ಎನ್ನಲಾಗುತ್ತಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಚಾಲಕರು ಚೇತರಿಸಿಕೊಳ್ಳುತ್ತಿದ್ದಾರೆ.