ಕಾಸರಗೋಡು, ಸೆ.7(DaijiworldNews/AA): ರಾಜ್ಯದಲ್ಲಿ ಇನ್ಫ್ಲ್ಯೂ ವೆನ್ಸ್ ಜ್ವರ ಹರಡುತ್ತಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕಾಸರಗೋಡು ಪಡನ್ನಕ್ಕಾಡ್ ಕೃಷಿ ಕಾಲೇಜಿನ 30 ರಷ್ಟು ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಲ್ಲಿ 9 ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡಿದೆ. ಆಲಪ್ಪುಳದ ವೈರಾಲಜಿ ಸಂಸ್ಥೆಯಲ್ಲಿ ಎ ಗುಂಪಿನ ಸೋಂಕನ್ನು ಪತ್ತೆಹಚ್ಚಲಾಗಿದೆ ಮತ್ತು ಪರಿಶೀಲಿಸಲಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ ಎಚ್1ಎನ್1 ಮತ್ತು ಎಚ್ಎ3ನ್2 ಗುಂಪಿನ ವೈರಸ್ ಜ್ವರಕ್ಕೆ ಕಾರಣ ಎಂದು ಹೇಳಲಾಗಿದೆ.
ಖಾಸಗಿ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಎಚ್1ಎನ್1 ಪಾಸಿಟಿವ್ ದೃಢಪಟ್ಟಿದೆ. ಜ್ವರದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅರೋಗ್ಯ ಇಲಾಖೆ ತಿಳಿಸಿದೆ